ರಾಜ್ಯದಲ್ಲಿ ಈಗ ಮೂರು ಮಹಾನಗರ ಪಾಲಿಕೆ ಚುನಾವಣೆಗಳು ನಡೆಯುತ್ತಿವೆ. ಹುಬ್ಬಳ್ಳಿ ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಪಾಲಿಕೆಗೆ ಇಂದು ಮತದಾನ ನಡೆಯುತ್ತಿದೆ. ಈ ಪಾಲಿಕೆ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಮಾಹಾನಗರದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲ್ಲುವು ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಕುಟುಂಬ ಸಮೇತವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿ ಸವಿಂಧಾನಿಕ ಮತದಾನ ಹಕ್ಕು ಚಲಾವಣೆ ಮಾಡಿದ ಬಳಿಕ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ನಗರಳಲ್ಲಿನ ಮತದಾನದ ಕುರಿತು ಪೋನ್ ಕರೆಯ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇನೆ. ಅಲ್ಲದೆ ಒಂದು ಬಾರಿ ಪಾಲಿಕೆ ಚುನಾವಣೆ ಪ್ರಚಾರ ಕೂಡಾ ಮಾಡಿದ್ದೇನೆ. ಅಲ್ಲದೆ ಅವಳಿನಗರದ ಪ್ರಮುಖ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಪಕ್ಷದ ಆಡಳಿತ ಅವಧಿಯಲ್ಲಿ ಆಗಿವೆ. ಸ್ಥಳಿಯ ಜಿಲ್ಲೆಯ ಮಟ್ಟದಲ್ಲಿ ಬಿಜೆಪಿ ಹೊರತುಪಡಿಸಿ ಉಳಿದಂತಹ ಯಾವುದೇ ಪಕ್ಷಕ್ಕೂ ಬಲಿಷ್ಠ ನಾಯಕತ್ವ ಹೊಂದಿಲ್ಲ.ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದೇವೆ. ಬಿಜೆಪಿ ನಾಯಕತ್ವದ ಮೇಲೆ ಜನ ವಿಶ್ವಾ ಇಟ್ಟಿದ್ದಾರೆ. ಹಾಗಾಗಿ ಬಿಜೆಪಿ 60 ರಿಂದ 55 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
*ಬಿಎಸ್‌ವೈ ಅವರನ್ನು ಯಾರು ಸಿಎಂ ಸ್ಥಾನದಿಂದ ತೆಗೆದು ಹಾಕಿಲ್ಲ.*
ಇತ್ತೀಚೆಗೆ ಕೆಲವರು ಬಿಎಸ್ ವೈ ಅವರನ್ನು ತೆಗೆದು ಹಾಕಲಾಗಿದೆ ಎಂಬ ಅರ್ಥದಲ್ಲಿ ಮಾತಾಡುತ್ತಿದ್ದಾರೆ. ಆದರೆ ಅದೂ ಸರಿಯಲ್ಲ. ಬಿಎಸ್‌ವೈ ಅವರು ತೆಗೆದು ಹಾಕಿಲ್ಲ ಸ್ವತಃ ಬಿಎಸ್‌ವೈ ಅವರು ನಮ್ಮ ಪಕ್ಷದ ಹೈ ಕಮಾಂಡ್‌ಗೆ ನಾನು ಸಿಎಂ ಸ್ಥಾನದಿಂದ ನಿರ್ಗಮಿಸುತ್ತೇನೆ ಅಂತಾ ಹೇಳಿದರು. ಅದರಂತೆ ವರಿಷ್ಠರು ತುಂಬಾ ಯೋಚನೆ ಮಾಡಿ, ಅಳೆದು ತೂಗಿ ಸ್ಥಳಿಯ ನಾಯಕರ ಅಭಿಪ್ರಾಯ ಸಂಗ್ರಹಿಸಿ. ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿವರನ್ನು ಆಯ್ಕೆ ಮಾಡಿದ್ದಾರೆ. ಈಗ ಅವರು ಕೂಡಾ ಉತ್ತಮವಾದ ಆಡಳಿತ ನೀಡುತ್ತಿದ್ದಾರೆ. ಮುಂದಿನ ಚುನಾವಣೆ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಹೋಗುವ ಅರ್ಥದ ಕೇಂದ್ರ ಗೃಹ ಸಚಿವರ ಮಾತುಗಳಲ್ಲಿ ತಪ್ಪೆನಿಲ್ಲ. ಈಗ ಹಾಲಿ ಸಿಎಂ ಆಗಿ ಯಾರ ಇರುತ್ತಾರೋ, ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋಗುವುದು ಎಲ್ಲ ಪಕ್ಷಗಳ ಸಹಜ ಪ್ರಕ್ರಿಯಾಗಿದೆ, ಅದು ಚರ್ಚೆಯ ವಿಷಯವಲ್ಲ ಎನ್ನುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡರು.
*ಜಗದೀಶ ಶೆಟ್ಟರ- ಬಿಎಸ್‌ವೈ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ.*
ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪನವರು ಹಾಗೂ ಜಗದೀಶ ಶೆಟ್ಟರವರು ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಅವರನ್ನು ಪಕ್ಷದಿಂದ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಜಗದೀಶ ಶೆಟ್ಟರವರು ಸಿಎಂ ಆಗಿ, ವಿಪಕ್ಷ ನಾಯಕರ ಆಗಿ, ಸ್ಪೀಕರ್ ಆಗಿ ಅಲ್ಲದೆ ಸಚಿವರಾಗಿ ಉತ್ತಮವಾದ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳುತ್ತದೆ. ಬರುವ ದಿನಗಳಲ್ಲಿ ಪಕ್ಷದಿಂದ ಕೋರ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ಇಬ್ಬರು ನಾಯಕರ ಸಲಹೆ ಸೂಚನೆಗಳನ್ನು ಪಡೆದುಕೊಂಡು ರಾಜ್ಯ ಮಟ್ಟದಲ್ಲಿ ತೀರ್ಮಾನಗಳನ್ನು ಕೈಗೊಳ್ಳುತ್ತೆವೆ ಎಂದರು.