ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ ಇದರ ನಡುವೆ ಮತ ಕೇಳಲು ಬಂದ ಅಭ್ಯರ್ಥಿಗೆ ಸಾರ್ವಜನಿಕರ ಪರವಾಗಿ ನಿಖಿಲ್ ದಾಂಡೇಲಿ ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು….ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ಮದ್ಯೆ ಚುನಾವಣೆ ಬಂದರೇ ಮಾತ್ರ ಜನರು ನೆನಪು ಆಗುತ್ತಾರೆ ಎಂದು ವಾರ್ಡ್ ನಂಬರ್ 50 ರ ಅಭ್ಯರ್ಥಿ ಮಂಗಳಮ್ಮಾ ಮೋಹನ ಹಿರೇಮನಿ ಅವರ ಪತಿ ಮೋಹನ ಹಿರೇಮನಿ ಅವರು ಮತ ಕೇಳಲು ಹೋದಾಗ, ಸಾರ್ವಜನಿಕರ ಪರವಾಗಿ ನಿಖಿಲ್ ದಾಂಡೇಲಿ ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ, ಸ್ಯಾನಿಟೈಸರ್ ಮಾಡಸಿಲ್ಲ, ನೀವೂ ಎಂತಹ ಜನಸೇವಕರು,ಕೇವಲ ಚುನಾವಣೆ ಬಂದರೆ ಮಾತ್ರ ಬಡವರು ನೆನಪು ಆಗುತ್ತಾರೆ ನಿಮಗೆ ಯಾಕೇ ವೋಟ್ ಹಾಕಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ,ಇದೇ ಸಂದರ್ಭದಲ್ಲಿ ಮೋಹನ ಹಿರೇಮನಿ ಅವರ ಮಾತಿಗೆ ಉತ್ತರ ನೀಡದೇ ಮುಂದೆ ಪ್ರಚಾರಕ್ಕೆ ಹೋಗಿದ್ದಾರೆ.