ಹುಬ್ಬಳ್ಳಿ: ಮಹಾನಗರ ಪಾಲಿಕೆಯ 42 ನೇ ವಾರ್ಡಿನ ಅಭ್ಯರ್ಥಿ ಬಿಜವಾಡ ಚೈತನ್ಯ ರಜನಿಕಾಂತ್ ಅವರ ಪರ ಬೆಂಗೇರಿ, ನಾಗಶೆಟ್ಟಿಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧೆಡೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಾಯಿತು.
ಅನೇಕ ವರ್ಷಗಳಿಂದ ವಾರ್ಡಿನಲ್ಲಿ ಒಳಚರಂಡಿ, ಗಟಾರು, ಬೀದಿ ದೀಪ ಸಹಿತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಿಲ್ಲವಾಗಿದ್ದು, ವಾರ್ಡಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಜೀವನ ಮಟ್ಟವನ್ನು ಉನ್ನತೀಕರಿಸುವುದಕ್ಕೆ ಮನೆ ಮಗನಾದ ತಮಗೆ ಆರ್ಶೀವದಿಸಿದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ವಾರ್ಡಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷಯೊಂದೆ ಪರ್ಯಾಯವಾಗಿದ್ದು, ವಾರ್ಡಿನ ಅಭಿವೃದ್ಧಿ ಬಗೆಗೆ ತಮ್ಮದೇ ಆದ ಯೋಜನೆಗಳಿದ್ದು, ಅನುಷ್ಠಾನಕ್ಕೆ ಮತ ನೀಡಬೇಕಂದರು.
ಪ್ರಚಾರದಲ್ಲಿ ಮುಖಂಡರಾದ ಮುಖಂಡರಾದ ರಜನಿಕಾಂತ್ ಬಿಜವಾಡ, ಅಬ್ದುಲ್ ಗಣಿ, ಪ್ರಕಾಶ ಹೆಸರೂರು, ಕಲಪ್ಪ ವಾಲಿಕಾರ್, ನವೀದ್ ನದಾಫ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
Hubli News Latest Kannada News