ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ 58 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಶೃತಿ ಸಂತೋಷ ಚಲವಾದಿ ಪರ ಹಲವು ಯುವಕರ ತಂಡ ನಮ್ಮ ಓಣಿ ನಮ್ಮ ಮನೆಯ ಮಗಳು ಎಂದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ನಿರೀಕ್ಷಿಸಿದಷ್ಟು ಅಭಿವೃದ್ಧಿ ಕನಸುಗಳು ನನಸಾಗಿಲ್ಲ. ಹೀಗಾಗಿ ಇದೊಂದು ಬಾರಿ ಹೊಸಬರಿಗೆ ಆದ್ಯತೆ ನೀಡಿ ಎಂದು ಮತ ಯಾಚಿಸುತ್ತಿದ್ದಾರೆ.
ನಮ್ಮ ಕನಸುಗಳು :
> ಸಮಸ್ತ 58 ನೇ ವಾರ್ಡಿನ ಬಡವರಿಗೆ ಹೊಸ ಮನೆಗಳ ನಿರ್ಮಾಣ ಗುಡಿಸಲು ಮುಕ್ತ ನಗರದ ಪಣ, ಇನ್ನಷ್ಟು ಯೋಜನೆಗಳನ್ನು ತಲುಪಿಸುವ ಗುರಿ
> ರಸ್ತೆ, ನೀರು, ಸ್ವಚ್ಛತೆ, ಒಳಚರಂಡಿ, ಬೀದಿದೀಪ, ಉದ್ಯಾನವನಗಳ ನಿರ್ಮಾಣ ಹಾಗೂ ಬಡ ದಿನಗೂಲಿ ಕಾರ್ಮಿಕರಿಗೆ ಕಾರ್ಖಾನೆ ಸ್ಥಾಪಿಸುವುದು
> ಬಡ ಮಕ್ಕಳ ವಿದ್ಯಾಭ್ಯಾಸ, ಉಚಿತ ಕಂಪ್ಯೂಟರ್ ತರಭೇತಿ, ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ ತರಭೇತಿ ಕೇಂದ್ರ ಸ್ಥಾಪನೆ, ಹಾಗೂ ಯುವಕರಿಗೆ ವ್ಯಾಯಾಮ ಶಾಲೆ ಸ್ಥಾಪಿಸುವುದು.
> 58 ನೇ ವಾರ್ಡಿನ ಮಂದಿರ, ಮಜೀದಿ ಮತ್ತು ಚರ್ಚ್ ಜೀರ್ಣೋದ್ಧಾರಕ್ಕೆ ಆದ್ಯತೆ.
> ಗುಂಡಿ ಮುಕ್ತ, ಧೋಳು ಮುಕ್ತ ರಸ್ತೆ ನಿರ್ಮಾಣಕ್ಕೆ ಪಣ ಇನ್ನು ಹತ್ತು ಹಲವು ಅಭಿವೃದ್ಧಿ ಕಾರ್ಯವನ್ನು ಮಾಡುವ ಗುರಿ ಹೊಂದಿರುವುದಾಗಿ ಚಂದ್ರಕಾಂತ ಯಾದವ, ಜಗದೀಶ್ ಕಾಂಬಳೆ, ಎಂ ಮಾರಿ ಪಿಳ್ಳೆ, ಯಮನಪ್ಪ ಮಳ್ಳದ, ಸಮೀರ ಹೊಸಪೇಟೆ, ನಾಗರಾಜ ಮಳ್ಳದ ಮನವೊಲಿಸುತ್ತಿದ್ದಾರೆ.
ಜನತಾ ಕಾಲೋನಿ, ರಾಮ ನಗರ, ವಿನೋಬಾನಗರ, ಜ್ಯೋತಿ ನಗರ, ಆಜಾಧ ನಗರ, ನೆಹರು ನಗರ ಸೇರಿದಂತೆ ವಾರ್ಡ್ ವಿವಿಧ ಬಡಾವಣೆಯಲ್ಲಿ ಹಲವು ಗುರು ಹಿರಿಯರ, ಮಹಿಳೆಯರ ಹಾಗೂ ವಿಶೇಷವಾಗಿ ಯುವಕರು ಒಲುವು ತೋರಿಸಿದ್ದಾರೆ.