ಕರ್ನಾಟಕದಲ್ಲಿ ಸರ್ಕಾರವೇ ಇಲ್ಲ ಎಂಬುವುದು ಇಡೀ ಜಗತ್ತಿಗೆ ಗೊತ್ತಿದೆ – ಮಾಜಿ ಸಚಿವ ಅರ್ ವಿ ದೇಶಪಾಂಡೆ.
ಹುಬ್ಬಳ್ಳಿ : ರಾಜ್ಯದಲ್ಲಿ ಸರ್ಕಾರ ಇದೆ ಎಂದು ಯಾರು ಹೇಳುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎನ್ನುವುದು ಇಡೀ ಜಗತ್ತಿಗೆ ತಿಳಿದಿರುವ ವಿಚಾರವಾಗಿದೆ. ಒಂದು ಮಂತ್ರಿ ಮಂಡಳ ಇದೆ ಅಂದ ಮಾತ್ರಕ್ಕೆ ಅರ್ಕಾರ ಇದೇ ಅಂತಾ ಹೇಳಲು ಸಾಧ್ಯವಿಲ್ಲ. ಸರ್ಕಾರ ಇದೆ ಅಂದರೆ ಅದೂ ಜನಪರ, ಅಭಿವೃದ್ಧಿ ಪರ ಹಾಗೂ ಸಮಾಜಿಕ ನ್ಯಾಯದ ಪರ ಕೆಲಸ ಮಾಡಬೇಕು ಅದನ್ನು ಇಂದಿನ ಸರ್ಕಾರ ಎಲ್ಲಿ ಮಾಡುತ್ತಿದೆ ಎಂದು ಮಾಜಿ ಸಚಿವ ಆರ್ ವಿ ದೇಶಪಾಂಡೆವರು ಕೀಡಿಕಾರಿದರು.
ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಇದಕ್ಕೆ ಮೈಸೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹೆಣ್ಮಕ್ಕಳ ಮೇಲೆ, ಪುರುಷರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಇಂದಿನ ಕಾನೂನು ಸುವ್ಯವಸ್ಥೆ ಹಿಂದೆಂದೂ ಇರಲಿಲ್ಲ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಯಾರು ಕೇಳುವವರೆ ಇಲ್ಲದಂಗಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಎನ್ನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ. ಈಗ ಬಿಜೆಪಿ ಸಚಿವರೇ ಹೆಣ್ಮಕ್ಕಳ ಕೈಯಲ್ಲಿ ಗನ್ ಕೊಡಿ ಎಂದು ಹೇಳುತ್ತಿದ್ದಾರೆ. ಇದೊಂದು ಬಿಜೆಪಿ ನಾಯಕರ ಹೊಸ ಸಂಸ್ಕ್ರತಿ ಆಗಿದೆ. ಬೇಕಾಬಿಟ್ಟಿಯಾಗಿ ಹೇಳಿಕೆ ಕೋಡುವುದು ಸರಿಯಲ್ಲ, ಗನ್ ಕೊಟ್ಟರೆ ದುಷ್ಪರಿಣಾಮಗಳು ಎನ್ನಾಗುತ್ತವೆ ಎಂಬುವುದರ ಬಗ್ಗೆ ತಿಳಿದು ಹೇಳಬೇಕು. ಆನಂದ ಸಿಂಗ್ ಅವರ ಹೇಳಿಕೆ ನೋಡಿದ್ದರೆ ಎಷ್ಟು ವಿಫಲರಾಗಿದ್ದಾರೆ ಎನ್ನುವುದು ಅರ್ಥವಾಗುತ್ತದೆ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದರು.