ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಹಾಲಿ ಸಿಎಂಗಳ ತವರು ಜಿಲ್ಲೆಯಾಗಿದೆ. ಮುಖ್ಯಂಮತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪಲ್ಹಾದ್ ಜೋಶಿಯವರು ಇಲ್ಲಿದ್ದಾರೆ. ಒಬ್ಬರು ಸಿಎಂ ಇನ್ನೊಬ್ಬರು ಕೇಂದ್ರ ಸಚಿವರು ಇಲ್ಲಿ ತುಂಬಾ ಅಭಿವೃದ್ಧಿ ಆಗಿರಬಹುದು ಅಂತಾ ತಿಳಿದುಕೊಂಡಿದ್ದೆ, ಆದರೆ ಅವಳಿನಗರದಲ್ಲಿ ಅಭಿವೃದ್ಧಿ ಅನ್ನುವುದು ತುಂಬಾ ಕುಂಠಿತವಾಗಿರುವು ಎದ್ದು ಕಾಣುತ್ತಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯ ವಾಗ್ದಾಳಿ ನಡೆಸಿದರು.
ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಬಾರಿ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇತ್ತು. ಆಗ ಅವರು ನೀಡಿದ ಭರವಸೆ ಪಟ್ಟಿಗಳಲ್ಲಿ ಶೇಕಡಾವಾರು 80 ರಷ್ಟು ಹಾಗೇ ಉಳಿದುಕೊಂಡಿವೆ. ಮಾಜಿ ಸಿಎಂ, ಹಾಲಿ ಸಿಎಂ ಹಾಗೂ ಕೇಂದ್ರ ಸಚಿವರು, ಶಾಸಕ ಅರವಿಂದ ಬೆಲ್ಲದರವರು ಇರುವಂತಹ ನಗರಗಳು ಇವು. ಅಭಿವೃದ್ಧಿ ಮಾಡುವಲ್ಲಿ ಬಿಜೆಪಿಗರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹೇಳಿದರು.
ಅವಳಿ ನಗರವನ್ನು ಸ್ಮಾರ್ಟ್ ಸಿಟಿಗೆ ಸೇರಿಸಲಾಗಿದೆ . ಸ್ಮಾರ್ಟ್ ಸಿಟಿಗೆ ಸೇರಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿವೆ. ಅಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಕೂಡಾ ಅವಳಿ ನಗರಕ್ಕೆ ಬಂದಿದೆ. ಆದರೆ ಅದನ್ನು ಉಪಯೋಗಿಸಿ ಅಭಿವೃದ್ಧಿ ಮಾಡುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ವಿಫಲವಾಗಿದೆ ಎಂದು ಹರಿಹಾಯ್ದರು.