ಹುಬ್ಬಳ್ಳಿ: ಪಾಲಿಕೆ ಚುನಾವಣೆಯ 71 ನೇ ವಾರ್ಡಿನ ಎಐಎಂಐಎಂ ಹುರಿಯಾಳಾದ ನಜೀರ್ ಅಹ್ಮದ್ ಹೊನ್ಯಾಳ ಅವರಿಂದು ಪಡದಯ್ಯನ ಹಕ್ಕಲ, ಕೂಲಿಗಾರ ಪ್ಲಾಟ್, ಕುಮಾರ್ ಓಣಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ ತಮ್ಮನ್ನು ಈ ಬಾರಿ ಆಯ್ಕೆ ಮಾಡುವಂತೆ ವಿನಂತಿಸಿದ್ದು ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ವಾರ್ಡಿನಲ್ಲಿನ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಎಐಎಂಐಎಂ ಪಕ್ಷಯೊಂದೆ ಪರ್ಯಾಯವಾಗಿದ್ದು, ವಾರ್ಡ್ ನಲ್ಲಿ ಬರುವ ರಸ್ತೆ, ಗಟಾರ್ ಸಹಿತ ಇತರ ಅಭಿವೃದ್ಧಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಾರ್ಡಿನ ಸಮಗ್ರ ಅಭಿವೃದ್ಧಿಯ ಬಗೆಗೆ ತಮಗೆ ನನ್ನದೇ ಆದ ಕನಸುಗಳಿದ್ದು ಅದನ್ನು ನನಸು ಮಾಡಲು ಸದವಕಾಶವನ್ನು ನೀಡಬೇಕು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಗಾಳಿಪಟವನ್ನು ಹಾರಿಸಿದ್ದೆ ಆದ್ದಲ್ಲಿ ಹೊಸ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಈ ದಿಸೆಯಲ್ಲಿ ನಿಮ್ಮ ಮನೆ ಮಗನಿಗೆ ಆರ್ಶೀವದಿಸುವಂತೆ ವಿನಂತಿಸಿದರು.
ಮತಯಾಚನೆ ವೇಳೆ ಮುತ್ವಲಿ ಗೌಸ ಕರ್ನೂಲ್, ಮುಖಂಡರಾದ ಗೈಬುಸಾಬ ಹೊನ್ಯಾಳ, ಮುಸ್ತಾಕ್ ಕಲ್ಯಾಣಿ, ಸಲೀಂ ಬೆಂಗೇರಿ, ಗೌಸ ಜಂಗಾಪುರಿ, ಪಯಾಜ್ ಮಿಶ್ರಿಕೋಟಿ ಸೇರಿದಂತೆ ಮುಂತಾದವರು ಇದ್ದರು.