ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ ನಂಬರ್ 68 ರ ಕಾಂಗ್ರೆಸ್ ಅಭ್ಯರ್ಥಿ ನಿರಂಜನಯ್ಯ ಹಿರೇಮಠ ಇಂದು ಭರ್ಜರಿ ಪ್ರಚಾರ ನಡೆಸಿದರು.
ಇಂದು 68 ನೇ ವಾರ್ಡ್ ವ್ಯಾಪ್ತಿಯ ಘಂಟಿಕೇರಿ, ಜೋಳದ ಓಣಿ, ವಡ್ಡರ ಓಣಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮತದಾರರು ನನಗೆ ಆರ್ಶೀವಾದ ಮಾಡಿದರೆ 68 ನೇ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತೇನೆ. ಈ ಭಾಗದ ರಸ್ತೆ, ಬೀದಿ ದೀಪ, ನೀರಿನ ಸೌಕರ್ಯ, ಸ್ವಚ್ಛತೆಗೆ ಒತ್ತು ನೀಡುತ್ತೇನೆ. ವಾರ್ಡ್ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಅಲ್ಲದೇ ಸರ್ಕಾರ ಹಾಗೂ ಮಹಾನಗರ ಪಾಲಿಕೆಯಿಂದ ಬರುವ ಎಲ್ಲ ಸೌಲಭ್ಯಗಳು ವಾರ್ಡ್ ಜನರಿಗೆ ಕಲ್ಪಿಸುವ ಶತಪ್ರಯತ್ನ ಮಾಡಿ ಹು-ಧಾ ಮಹಾನಗರದಲ್ಲೇ 68 ನೇ ವಾರ್ಡ್ ನ್ನು ಮಾದರಿ ವಾರ್ಡ್ ಮಾಡುವ ಗುರಿ ಹೊಂದಿದ್ದೇನೆ. ಕಾರಣ ಪಕ್ಷದ ಗುರುತು ಹಸ್ತಕ್ಕೆ ತಮ್ಮ ಅತ್ಯಮೂಲ್ಯವಾದ ಮತ ನೀಡಿ ಆರ್ಶೀವದಿಸುವಂತೆ ಕೋರಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಶೇಖಣ್ಣಾ ಬೇಂಡಿಗೇರಿ, ಕಲ್ಲಪ್ಪಣ್ಣ ಮಟ್ಟಿ, ನಿಜಗುಣಿ ಹಡಗಲಿ, ಸಂತೋಷ ಕ್ಯಾತನ್ನವರ, ಅಜ್ಜಪ್ಪ ಸುರಗು ಎ.ಎಲ್.ಹಿರೇಮಠ, ಶಂಭು ಅತ್ತಿಕಾಳ ಸೇರಿದಂತೆ ಮುಂತಾದ ಮಹಿಳಾ ಮುಖಂಡರು ಉಪಸ್ಥಿತರಿದ್ದರು.