Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಎಐಎಂಐಎಂ ಪಕ್ಷದ ಅಭ್ಯರ್ಥಿ ಆಸೀಫ್ ಬಳ್ಳಾರಿ ಅವರಿಂದ ವಾರ್ಡ್ ನಂಬರ್ 63 ರಲ್ಲಿ ಬಿರುಸಿನ ಪ್ರಚಾರ

ಎಐಎಂಐಎಂ ಪಕ್ಷದ ಅಭ್ಯರ್ಥಿ ಆಸೀಫ್ ಬಳ್ಳಾರಿ ಅವರಿಂದ ವಾರ್ಡ್ ನಂಬರ್ 63 ರಲ್ಲಿ ಬಿರುಸಿನ ಪ್ರಚಾರ

Spread the love

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹ್ಮದ್ ಹೊನ್ಯಾಳ ವಾರ್ಡ್ ನಂಬರ್ 63 ರ ಅಭ್ಯರ್ಥಿ ಆಸೀಫ್ ಇಕ್ಬಾಲ್ ಬಳ್ಳಾರಿ ಅವರ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.

 

ಈ ವೇಳೆ ಗಣೇಶಪೇಟ್, ಫಿಶ್ ಮಾರ್ಕೆಟ್, ಶೆಟ್ಟರ್ ಓಣಿ, ದಿನ್ನರಗಿ ಓಣಿ, ಕುಂಬಾರ ಓಣಿ, ಜಮಾದಾರಚಾಳ ಸೇರಿದಂತೆ ಮುಂತಾದ ಕಡೆಗಳಲ್ಲಿ ಎಐಎಂಐಎಂ ಕಾಯಕತತ್ವ ಆಡಳಿತದ ಬಗ್ಗೆ ತಿಳುವಳಿಕೆ ನೀಡಿದರು. ಬಡವರೆ ಅಭ್ಯುದಯಕ್ಕೆ ಶ್ರಮಿಸುವ ಪಕ್ಷ ಎಂದರೆ ಎಐಎಂಐಎಂ. ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನತೆ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಜನತೆ ಬದಲಾವಣೆ ಬಯಸಿದ್ದು, ಈ ನಿಟ್ಟಿನಲ್ಲಿ ಮತದಾರರು ಎಐಎಂಐಎಂ ಪಕ್ಷದತ್ತ ವಾಲುತ್ತಿದ್ದಾರೆ. ವಾರ್ಡ್ ನ ಸರ್ವಾಂಗೀಣ ಪ್ರಗತಿ ಹಾಗೂ ಸಮಗ್ರ ಬದಲಾವಣೆಗೆ ಪಕ್ಷದ ಗುರುತಾದ “ಗಾಳಿಪಟ” ಗುರುತಿಗೆ ತಮ್ಮ ಅತ್ಯಮೂಲ್ಯವಾದ ಮತ ನೀಡಿ‌ ಆಶೀರ್ವದಿಸುವಂತೆ ಕೋರಿ ಮತಯಾಚನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅಬ್ಬಾಸ್ ಕುಮಟೆಕರ್, ಶಹಬಾಜ್ ಅಹ್ಮದ್, ಮೌಲಾ ಕುಮಟೆಕರ್, ಯೂಸೂಫ್ ಕೈರಾತಿ, ಇಮ್ತಿಯಾಜ್ ಕುಮಟೆಕರ್ ಸೇರಿದಂತೆ ಮುಂತಾದವರು ಇದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]