ಧಾರವಾಡ : ಅಫ್ಘಾನಲ್ಲಿರು ತಾಲಿಬಾನಿಗಳು ರಾಕ್ಷಸರಾಗಿ ವರ್ತಿಸುತ್ತಿದ್ದಾರೆ. ತಾಲಿಬಾನಿಗಳ ರಾಕ್ಷಸ ನಡೆಯಿಂದ ಸಾಮಾನ್ಯ ಜನರಿಗೆ ಅಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಾಲಾಬಾನಿಗಳಿಗೆ ಆ ದೇವರೆ ಬುದ್ದಿ ನೀಡಬೇಕು ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹೇಳಿದರು.
ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಫ್ಘಾನಿಸ್ತಾದಲ್ಲಿರುವ ತಾಲಿಬಾನಿಗಳು ರಾಕ್ಷಸರಾಗಿದ್ದಾರೆ. ಅವರಿಗೆ ಆದಷ್ಟು ಬೇಗ ದೇವರು ಒಳ್ಳೆಯ ಬುದ್ದಿ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದರು.
*ಆನಂದ ಸಿಂಗ್ ಮುನ್ನಿಸು ಅವರ ಬಳಿಯೇ ಕೇಳಿ*
ಸಚಿವ ಆನಂದ ಸಿಂಗ್‌ರವರ ಖಾತೆಯ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅವರ ಸಮಸ್ಯೆಯನ್ನು ಅವರ ಬಳಿಯೇ ಕೇಳಿ. ನನ್ನ ಬಳಿ ಕೇಳಿದ್ರೆ ಅದಕ್ಕೆ ಯಾವುದೆ ಪ್ರತಿಕ್ರಿಯೆ ಸಿಗುವುದಿಲ್ಲ. ನನ್ನ ಧಾರವಾಡ 71ನೇ ಕ್ಷೇತ್ರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಕೇಳಿ, ಅದನ್ನು ಪರಿಹರಿಸುತ್ತೇನೆ ಎಂದರು.