ಧಾರವಾಡ : ವಿಜಯಪುರದಿಂದ IAS ಕನಸು ಕಟ್ಟಿಕೊಂಡು ಧಾರವಾಡದಲ್ಲಿ ತರಭೇತಿ ಪಡೆಯುತ್ತಿದ್ದ ಯುವಕನೊಬ್ಬ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಧಾರವಾಡ ನಗರದ ಮಾಡರ್ನ್ ಹಾಲ್ ಬಳಿ ನಡೆದಿದೆ.
ಮೃತ ಯುವಕನನ್ನು ಮಹೇಶ ಭಜಂತ್ರಿ ಎಂದು ಗುರುತಿಸಲಾಗಿದೆ. ಇನ್ನೂ ಮಹೇಶ ಭಜಂತ್ರಿ ಕಳೆದ ದಿನ ತಡ ರಾತ್ರಿ ಧಾರವಾಡ ಟೋಲ್‌ನಾಕಾ ಮಾರ್ಗವಾಗಿ ವಿದ್ಯಾಗಿರಿಯ ಬಳಿ ದಾನೇಶ್ವರಿ ನಗರ ತನ್ನ ರೂಮಗೆ ತೆರಳುತ್ತಿದ್ದರು. ಈ ವೇಳೆ ಮಾಡರ್ನ್ ಹಾಲ್ ಬಳಿ ಬರುತ್ತಿದಂತೆ ಬೈಕ್ ನಿಯಂತ್ರಣ ತಪ್ಪಿ ಫುಟ್‌ಪಾತ್ ಡಿವೈಡರ್‌ಗೆ ಬೈಕ್ ರಬ್ಬಸವಾಗಿ ಡಿಕ್ಕಿಯಾಗಿದೆ. ಇದರಿಂದ ತಲೆ ಭಾಗಕ್ಕೆ ತೀವ್ರವಾದ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಯುವಕ ಸಾವನಪ್ಪಿದ್ದಾನೆ.
ಮೃತ ಯುವಕ ಮೂಲತಃ ವಿಜಯಪುರ ಜಿಲ್ಲೆಯ ನಿವಾಸಿಯಾಗಿದ್ದು, IAS ತರಭೇತಿಗಾಗಿ ಧಾರವಾಡಕ್ಕೆ ಆಗಮಿಸಿದ್ದನ್ನು. ಧಾರವಾಡ ದಾನೇಶ್ವರಿ ನಗರದಲ್ಲಿ ರೂಮ ಮಾಡಿಕೊಂಡಿದ್ದ. ರೂಮ್ ಗೆ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಧಾರವಾಡ ಸಂಚಾರಿ ಠಾಣೆಯ ವ್ಯಾಒ್ತಿಯಲ್ಲಿ ಪ್ರಕರಣ ದಾಖಲಾಗಿದೆ.