ಹುಬ್ಬಳ್ಳಿ : ರಾಜಕೀಯವಾಗಿ ನನನ್ನು ಮುಗಿಸಲು ಶಾಸಕ ಪ್ರಸಾದ್ ಅಬ್ಬಯ್ಯ ಷಡ್ಯಂತ್ರ ಮಾಡಿದ್ದಾರೆ ಎಂದು ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಆರೋಪಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರಸಾದ್ ಅಬ್ಬಯ್ಯ ಅವರು ಅಸತ್ಯದ ಹಾದಿಯಲ್ಲಿದ್ದಾರೆ. ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಬೇಕಾಬಿಟ್ಟಿ ರಾಜಕಾರಣ ಮಾಡುತ್ತಿದ್ದಾರೆ. ಅದರ ವಿರುದ್ಧ ನಾನು ಸತ್ಯದ ಹಾದಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕಾರಣದಿಂದ ನನಗೆ ರಾಜಕೀಯವಾಗಿ ಮುಗಿಸಲು ಈ ಹಿಂದೆ ನಾನು ಸ್ಪರ್ಧಿಸಿದ ವಾರ್ಡ್ ನ್ನು ತಪ್ಪಿಸಲು ವಾರ್ಡ್ ನ್ನು ಛಿದ್ರ ಛಿದ್ರ ಮಾಡಿ ವಾರ್ಡ್ ಕೈತಪ್ಪುವಂತೆ ಮಾಡಿದ್ದಾರೆ. ಆದರೆ ಈ ರೀತಿ ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದರು.