ಹುಬ್ಬಳ್ಳಿ : ನಗರದ ದೇಶಪಾಂಡೆ ನಗರದ ಗುಜರಾತ್ ಭವನದಲ್ಲಿ ಆಯೋಜಿಸಿರುವ ‘ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಇಂದು ಚಾಲನೆ ಕಾಂಗ್ರೆಸ್ ಮುಖಂಡೆ ದೇವಿಕಾ ಯೋಗನಂದ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದ್ದು, ಚೀನಾ ರೇಷ್ಮೆಗೆ ಭಾರತದ ರೇಷ್ಮೆ ಪ್ರತಿರೋಧ ನೀಡುವ ಸಾಮರ್ಥ್ಯ ಹೊಂದಿದೆ. ಈಗ ಎಲ್ಲೆಡೆ ಭಾರತದ ರೇಷ್ಮೆ ಪ್ರಖ್ಯಾತಗೊಳ್ಳುತ್ತಿದೆ. ಇಲ್ಲಿ ಬೇರೆ, ಬೇರೆ ರಾಜ್ಯಗಳ ರೇಷ್ಮೆ ವಿನ್ಯಾಸ ಜನರ ಗಮನ ಸೆಳೆಯಲಿದೆ ಎಂದರು.
ಸಿಲ್ಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮಾನಸ ಆಚಾರ್ಯ ಮಾತನಾಡಿ, ಹುಬ್ಬಳ್ಳಿಯ ಸೀರೆ ಪ್ರಿಯರಿಗೆ ಅತ್ಯುತ್ತಮ ಸೀರೆಗಳನ್ನು ನೀಡಲು ಸಿಲ್ಕ್ ಇಂಡಿಯಾದಿಂದ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಅ.22 ರವರೆಗೆ ನಡೆಯಲಿರುವ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ವಿನ್ಯಾಸಗಳು ಪ್ರದರ್ಶನಗೊಳ್ಳಲಿವೆ. ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು, ರೇಷ್ಮೆ ಸಹಕಾರ ಸಂಘಗಳ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.