ಧಾರವಾಡ್ : ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಮಂಜೂರಾಗುತ್ತಿದ್ದಂತೆ ಬಾರಾಕೊಟ್ರಿಯಲ್ಲಿರುವ ವಿನಯ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಜಾಮೀನು ಸಿಕ್ಕ ಸುದ್ದಿ ಹೊರಬರುತ್ತಿದ್ದಂತೆ ವಿನಯ್ ಅವರ ಮನೆ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿನಯ್ ಅಭಿಮಾನಿಗಳು ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜೊತೆಗೆ ಧಾರವಾಡ ಹುಲಿ ವಿನಯ್ ಕುಲಕರ್ಣಿಗೆ ಎಂದು ಜಯಘೋಷ ಹಾಕಿದರು. ರಾಜಕೀಯ ಮುಖಂಡರು ಕೂಡ ವಿನಯ್ ಅವರ ಮನೆಗೆ ದೌಡಾಯಿಸುತ್ತಿದ್ದಾರೆ