ಹುಬ್ಬಳ್ಳಿ : ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತವಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಗಲೇಂದು ಕುಸುಗಲ್ ಗ್ರಾಮದ ಮಾರುತಿ ನಗರದ ಬಳಿ ಇರುವ ರೈಮನಶಾವಲಿ ದರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಹೌದ,, ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಆದಷ್ಟು ಬೇಗ ಅವರಿಗೆ ಜಾಮೀನು ಸಿಗಲಿ ಹಾಗೂ ಇನ್ನೂ ಹೆಚ್ಚು ಅವರು ಸಮಾಜ ಸೇವೆ ಸಲ್ಲಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥನೆ ಮಾಡಿದರು.ಇದೇ ಸಂದರ್ಭದಲ್ಲಿ,ಮುನ್ನಾ ಕಂಬಡೊಳ್ಳಿ, ಕಾಂಗ್ರೇಸ್ ಮುಖಂಡ ಪಕ್ಕಿರಗೌಡ ಪಾಟೀಲ, ಶೇಕಣ್ಣ, ಗುರುಸಿದ್ದ ಅರಳಿಕಟ್ಡಿ, ಮಾಬು ಸುಂಕದ, ನೀಲಪ್ಪ,ಮಲಂಗಸಾಬ ಗುದುಗಿ,ಕಲ್ಲಪ್ಪ ಡಾಲಾಯತರ್,ಖಾಸೀಂಸಾವ ಮಿರ್ಜಾನವರ,ದಾದಾಪೀರ ಸಲೀಂ ಅಗಸನಹಳ್ಳಿ,ಶರೀಪ ಗುದುಗಿ,ರಿಯಾಜಖಾನ್ ಸೇರಿದಂತೆ ಇನ್ನಿತರರು ಇದ್ದರು.