ಹುಬ್ಬಳ್ಳಿ – ಪ್ರವರ್ಗ 2ಎ ಮೀಸಲಾತಿ ನೀಡಬೇಕೆಂಬ ಲಿಂಗಾಯತ ಪಂಚಮಸಾಲಿ ಸಮುದಾಯದ ಬೇಡಿಕೆಗೆ ಕೇಂದ್ರ ಸರ್ಕಾರ
ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದ್ದು ಸ್ವಾಗತಾರ್ಹವಾಗಿದೆ. ಈ ಕುರಿತು ಸಮಾಜದ ಸಚಿವರು ,ಶಾಸಕರು ಹಾಗೂ ಮುಖಂಡರು ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಬೇಕು ಎಂದು
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿದ್ದು, ಈಗಾಗಲೇ
‘ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆಗೆ ಎಲ್ಲರೂ ಹೋರಾಟ ಮಾಡಬೇಕಾಗಿದ್ದು ಈ ಕುರಿತು ಶೀಘ್ರವೇ ಟ್ರಸ್ಟ್ ನೇತೃತ್ವದಲ್ಲಿ
ನಿಯೋಗ ತೆಗೆದುಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಟ್ರಸ್ಟ್ ರಾಷ್ಟ್ರೀಯ ಅವ್ಯಕ್ತರಾದ ಪ್ರಭಣ್ಣ ಹುಣಸಿಕಟ್ಟಿ, ಟ್ರಸ್ಟ್ ಗೌರವಾಧ್ಯಕ್ಷರಾದ ಪಿ.ಸಿ.ಸಿದ್ಧನಗೌಡರ, ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ,
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಧಾರವಾಡ ಜಿಲ್ಲಾ ಅಧ್ಯಕ್ಷ ಕಲ್ಲಪ್ಪ ಯಲಿವಾಳ, ಟ್ರಸ್ ಸಂಚಾಲಕರಾದ ಎಂ.ಎಸ್.ಮಲ್ಲಪುರ, ಧರ್ಮದರ್ಶಿಗಳಾದ ರಾಜು ಮರಳಪ್ಪನವರ, ನಾಗರಾಜ ಪಟ್ಟಣಶೆಟ್ಟಿ, ಸುರೇಶ ಗೋಡಿ, ಎಂ.ಬಸಪ್ಪ, ಬಸವರಾಜ ರೊಟ್ಟಿ, ಚಂದ್ರು ಹುಣಸಿಕಟ್ಟಿ, ಮಹಾದೇವಪ್ಪ ದಾಟನಾಳ, ಶಿವಪ್ಪ ಕೊಳ್ಳಿಯವರ, ಮುತ್ತಣ್ಣ ಬಾಡಿನ, ಎಂ.ಎಸ.ಪಾಟೀಲ, ಕುಮಾರ ಕುಂದನಹಳ್ಳಿ, ಸಮಾಜದ ಮುಖಂಡರಾದ ದೊಡ್ಡೆಸಪ್ಪ ನಲವಡಿ ತಿಳಿಸಿದ್ದಾರೆ.
