ಹುಬ್ಬಳ್ಳಿ : ಕೇಂದ್ರದಲ್ಲಿ ಮತ್ತು ಹಲವಾರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯ ಹೆಚ್ಚಾಗಿವೆ. ದಲಿತ ಮತ್ತು ಆದಿವಾಸಿಗಳ ಮಹಿಳೆಯರ ಮೇಲೆ ನಡೆಯುತ್ತಿರು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಸಮುದಾಯದಲ್ಲಿ ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಪ್ರಧಾನಿಗಳು ದೇಶದಲ್ಲಿ ಈ ದೌರ್ಜನ್ಯ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಎಫ್ ಹೆಚ್ ಜಕ್ಕಪ್ಪನವರ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಈ ದೇಶದ ದಲಿತ ಮತ್ತು ಆದಿವಾಸಿಗಳ ಪ್ರಾಣ ಮತ್ತು ಅಸ್ತಿ ರಕ್ಷಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ . ಆದ್ದರಿಂದ ಬರುವ 12 ರಂದು ದಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆಯ ಹಮ್ಮಿಕೊಳ್ಳಲಾಗಿದೆ ಎಂದರು.
ರಾಷ್ಟ್ರದಲ್ಲಿ ಇಂಥ ಪ್ರಕರಣಗಳು 45000 ಜರಗಿದ್ದು, ಉತ್ತರ ಪುದೇಶ ಒಂದೇ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಪೊಲೀಸರು ಅಪರಾಧಿಗಳಿಗೆ ಕಾವಲಾಗಿ ನಿಂತಿದ್ದಾರೆ . ಬಿಜೆಪಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಈ ದೇಶದ ದಲಿತ ಮತ್ತು ಆದಿವಾಸಿಗಳ ಪ್ರಾಣ ಮತ್ತು ಅಸ್ತಿ ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ, ಪರಿಶಿಷ್ಟ ಜಾತಿ ಇಲಾಖೆಯ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ ರಾವತ್ ರವರ ಕರೆಯ ಮೇರೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ತಿಳಿಸಿದರು.
ಬಿಜೆಪಿಯ ದಲಿತ ಮತ್ತು ಆದಿವಾಸಿಗಳ ವಿರೋಧಿ ಆಡಳಿತ ಖಂಡಿಸುವ ಪ್ರತಿಭಟನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೇರಿದಂತೆ ಕೇಂದ್ರ ಕಾಂಗ್ರೆಸ್ ಹಿರಿಯ ನಾಯಕರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.