ನವಲಗುಂದ: ತಮ್ಮ ತಾಯಿಯನ್ನ ಅತಿಯಾಗಿ ಪ್ರೀತಿಸುತ್ತಿದ್ದ, ಸಹೋದರನನ್ನ ಅಗಾದವಾಗಿ ಹಚ್ಚಿಕೊಂಡಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ತಮ್ಮೂರಿನಲ್ಲಿನ ತಾಯಿ-ತಂದೆ-ಸಹೋದರನ ಗದ್ದುಗೆಯ ಮುಂದೆ ಕಣ್ಣೀರಾದರು.
ನವಲಗುಂದ ತಾಲೂಕಿನ ಸ್ವಗ್ರಾಮವಾದ ಅಮರಗೋಳಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಂತಹ ದೃಶ್ಯ ಕಂಡು ಬಂದಿತು.
ಕಳೆದ ವರ್ಷವೇ ಸಚಿವರ ಸಹೋದರ ಹನಮಂತಗೌಡ ಪಾಟೀಲ ಹೃದಯಾಘಾತದಿಂದ ಅಗಲಿದ್ದರು. ಇದನ್ನ ಸ್ಮರಿಸಿಕೊಂಡು ಸಚಿವರು ಗದ್ಗಧಿತರಾದರು..
