ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಹು-ಧಾ ಮಹಾನಗರ ಪಾಲಿಕೆಯ ಜೆಸಿಬಿ ಸದ್ದು ಮಾಡಿದ್ದು, ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದ ದೇವಸ್ಥಾನ ಹಾಗೂ ದರ್ಗಾವನ್ನು ತೆರವು ಮಾಡಲಾಯಿತು.
ಸಿಸಿ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಹುಲಿಗೆಮ್ಮ ಗುಡಿ ಮತ್ತು ದರ್ಗಾ ನೆಲಸಮ ಮಾಡಲಾಗಿದ್ದು, ಹುಬ್ಬಳ್ಳಿಯ ಹೇಗ್ಗೆರಿಯ ಪಡಗಟ್ಟಿ ರಸ್ತೆಯಲ್ಲಿರುವ ಗುಡಿ ಮತ್ತು ದರ್ಗಾ ತೆರವುಗೊಳಿಸಲಾಗಿದೆ.
ಇನ್ನೂ ದರ್ಗಾ ಮತ್ತು ಗುಡಿ ತೆರವು ಹಿನ್ನೆಲೆಯಲ್ಲಿ, ಈ ಹಿಂದೆ ಎರಡು ಸಮಾಜದವರನ್ನು ಕರೆಯಿಸಿ ಸಭೆ ಮಾಡಿ, ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಿಯರ ಮನವೊಲಿಸಿದರು. ಸ್ಥಳಿಯರ ಸಹಕಾರ ಪಡೇದುಕೊಂಡ ನಂತರ ಇಂದು ಬೆಳ್ಳಂಬೆಳಗ್ಗೆ ಪೊಲೀಸ್ ಬಂದೋಬಸ್ತ್ ಜೊತೆಗೆ ರಸ್ತೆ ಅತಿಕ್ರಮ ಗುಡಿ ಮತ್ತು ದರ್ಗಾವನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.