ಹುಬ್ಬಳ್ಳಿ : ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಕೈ ತಪ್ಪಿಸಲು ಧಾರವಾಡ ಜಿಲ್ಲೆಯ ಬಿಜೆಪಿ ನಾಯಕರು ಹುನ್ನಾರ ನಡೆಸಿದ್ದಾರೆ ಎಂದು ಗೋಕುಲ ಗ್ರಾಮದ ರೈತ ಮುಖಂಡರು ಹಾಗೂ ಅರವಿಂದ ಬೆಲ್ಲದ ಬೆಂಬಲಿಗರು ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲ್ಲದ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದ ಶಾಸಕರಾಗಿದ್ದಾರೆ. ಆದರೆ ಸ್ವಪಕ್ಷಿಯರ ಅಸಮಾಧಾನ ಹಾಗೂ ಹುನ್ನಾರದಿಂದ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಕೈ ತಪ್ಪಿಸಲು ಪಣತೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಚಿವ ಸಂಪುಟದಲ್ಲಿ ಅರವಿಂದ ಬೆಲ್ಲದ ಅವರನ್ನು ನಿರ್ಲಕ್ಷ್ಯ ಮಾಡಿರುವುದನ್ನು ಮನಗಂಡು ರೈತರು ಹಾಗೂ ಅರವಿಂದ ಬೆಲ್ಲದ ಬೆಂಬಲಿಗರು ಇಬ್ಬರೂ ನಾಯಕರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗದಿದ್ದರೇ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹನುಮಂತ ಉಣಕಲ್, ಬಸಪ್ಪ ಎಲಿಗಾರ್, ಮಂಜುನಾಥ್ ಉಣಕಲ್, ರಾಮಣ್ಣ ಉಣಕಲ್, ಮಾರುತಿ ಉಣಕಲ್, ಮಡಿವಾಳಪ್ಪ ನಾಯ್ಕರ , ಬಲಪ್ಪ ಬಾದಾಮಿ ಇತರರು ಉಪಸ್ಥಿತರಿದ್ದರು.