ಹುಬ್ಬಳ್ಳಿ: ಭಾರಿ ಜನದಟ್ಟಣೆ ಹಾಗೂ ವಾಹನ ದಟ್ಟಣೆಯಿಂದ ಕೂಡಿರುವ ಚೆನ್ನಮ್ಮ ಸರ್ಕಲ್ ಫ್ಲೈಓವರ್ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರನ್ನು ಒತ್ತಾಯಿಸಿದ್ದಾರೆ ಕಳೆದ ಆರು ತಿಂಗಳು ಹಿಂದೆ ಫ್ಲೈಓವರ್ ಕಾಮಗಾರಿ ಆರಂಭಿಸಲಾಗುವುದೆಂಬ ಮಹೂರ್ತ ವಿಟ್ಟಂತೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವರ ಬೋರ್ಡ್ ಗಳನ್ನು ಹಾಕಿ ಪ್ರಚಾರ ಕೊಡಲಾಗಿತ್ತು ಆದರೆ ಇಂದಿನವರೆಗೂ ಕಾಮಗಾರಿಯ ಆರಂಭದ ಸೂಚನೆ ಕಾಣುತ್ತಿಲ್ಲ ಹುಬ್ಬಳ್ಳಿ ಭಾಗದವರೇ ರಾಜ್ಯದ ಮುಖ್ಯಮಂತ್ರಿ ಆಗಿರುವುದರಿಂದ ಮತ್ತು ಹುಬ್ಬಳ್ಳಿಯವರು ಶ್ರೀಪ್ರಹ್ಲಾದ ಜೋಶಿ ಯವರು ಕೇಂದ್ರ ಸಚಿವರಾಗಿರುವುದರಿಂದ ಈ ಭಾಗದ ಕಾಮಗಾರಿಗಳಿಗೆ ಬೇಗ ವೇಗ ಸಿಗುತ್ತದೆ ಎಂದು ಜನರು ಆಶಾಭಾವನೆ ಇಟ್ಟುಕೊಂಡಿದ್ದಾರೆ. ಇಕ್ಕಟ್ಟಾದ ರಸ್ತೆ ಭಾರೀ ಸಂಖ್ಯೆಯ ವಾಹನದಟ್ಟನೆ ಯಿಂದ ಟ್ರಾಫಿಕ್ ಜಾಮ್ ಆಗಿ ಪರಸ್ಥಳದ ಹೊರರಾಜ್ಯದ ಪ್ರಯಾಣಿಕರು ಹಿಡಿಶಾಪ ಹಾಕುವಂತಾಗಿದೆ ಹುಬ್ಬಳ್ಳಿಯ ಮಾನ ಕಾಪಾಡುವ ದೃಷ್ಟಿಯಿಂದಲಾದರೂ ಹಾಗೂ ಜನರ ಆಶಾ ಭಾವನೆಗಳಿಗೆ ಭಂಗ ಬರದಂತೆ ಶೀಘ್ರ ಕಾಮಗಾರಿ ಆರಂಭಿಸಬೇಕೆಂದೂ ಗಂಗಾಧರ ದೊಡವಾಡ ಒತ್ತಾಯಿಸಿದ್ದಾರೆ.
