Home / Top News / ಬಿಜೆಪಿ ಅವರಿಗೆ ಜನರ ಕಷ್ಟಕ್ಕಿಂತ ಅಧಿಕಾರವೇ ಮುಖ್ಯವಾಗಿದೆ- ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸರ್ಜೆವಾಲಾ.

ಬಿಜೆಪಿ ಅವರಿಗೆ ಜನರ ಕಷ್ಟಕ್ಕಿಂತ ಅಧಿಕಾರವೇ ಮುಖ್ಯವಾಗಿದೆ- ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸರ್ಜೆವಾಲಾ.

Spread the love

ಹುಬ್ಬಳ್ಳಿ : ರಾಜ್ಯದ ಅಕ್ಕಪಕ್ಕ ರಾಜ್ಯಗಳಲ್ಲಿ ‌ಕೊರೊನಾ ಮಾಹಾಮಾರಿ‌ ವೈರಸ್ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ. ಇಂತಹ‌ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಬರಬೇಕಿದ್ದ ರಾಜ್ಯ ಕೇಂದ್ರ ಸರ್ಕಾರಗಳಿಗೆ ಅಧಿಕಾರವೇ ಮುಖ್ಯವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾವರು ರಾಜ್ಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಹುಬ್ಬಳ್ಳಿಯ ಖಾಸಗಿ ಹೋಟೆನಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ನಾಯಕರ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ದೆಹಲಿಗೆ ದೌಡಾಯಿಸ್ತಾರೇ ಹೊರತು ಜನರ ಸಂಕಷ್ಟ ನಿವಾರಣೆಗಾಗಿ ಅಲ್ಲ. ಬಿಜೆಪಿ ಪಾರ್ಟಿ ಇದೊಂದು ಭ್ರಷ್ಟಾಚಾರ ಪಾರ್ಟಿಯಾಗಿದೆ. RTGS ಮೂಲಕ ಭೃಷ್ಟಾಚಾರವನ್ನು ಬಿಜೆಪಿ ಮಾಡುತ್ತಿದೆ. ರಾಜ್ಯ ಬಿಜೆಪಿ ನಾಯಕರಿಗೆ ರಾಜಕೀಯವೇ ಮುಖ್ಯವಾಗಿದೆ. ಸಂಪುಟ ಸೇರಲು ಒಬ್ಬರಿಗಿಂತ ಒಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ‌ ಶಾಸಕರುಗಳು ಜನರಿಗೆ ಮಹತ್ವ ನೀಡುತ್ತಿಲ್ಲ ಮಾಧ್ಯಮಗೋಷ್ಠಿ ಉದಕ್ಕೂ ವಾಗ್ದಾಳಿ ನಡೆಸುದರು.

*ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರದ್ದು ಭ್ರಷ್ಟಾಚಾರ ಸರ್ಕಾರ ಆಗಿತ್ತು*

ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಭ್ರಷ್ಟಾಚಾರ ಜಾಸ್ತಿ ಆಗಿದೆ. ಸರ್ಕಾರ ಗೂಡಾಚಾರ ಮಾಡ್ತಾ ಇದೆ. ಭ್ರಷ್ಟಾಚಾರ, ಪಕ್ಷಾಂತರ, ಬೇಹುಗಾರಿಕೆ ಮೂಲಕ ಸರ್ಕಾರ ಅಸ್ತತ್ವಕ್ಕೆ ಬಂದಿದೆ. ಯಡಿಯೂರಪ್ಪನವರ ಈ ಹಿಂದೆ ಮುಖ್ಯಮಂತ್ರಿ ಇದ್ದಾಗ ಆರ್ ಟಿಜಿಎಸ್ ಮೂಲಕ ಲಂಚ ಕೊಲ್ಕತ್ತಾದಿಂದ ತಮ್ಮ ಇಬ್ಬರು ಮಕ್ಕಳ‌‌‌ ಮೂಲಕ ಲಂಚದ ಹಣ ಪಡೆದುಕೊಂಡಿದ್ದಾರೆ‌‌ ಎಂದು ಗಂಭೀರ ಆರೋಪ‌ ಮಾಡಿದರು.

*ಸಿಎಂ ಬದಲಾದರೂ ಸರ್ಕಾರದ ಸ್ವಭಾವ ಬದಲಾಗಿಲ್ಲ.*

ಸಧ್ಯ ರಾಜ್ಯದಲ್ಲಿ ಸಿಎಂ‌ ಬದಲಾವಣೆ ಆಗಿದೆ. ಆದರೆ ಸರ್ಕಾರದ ಸ್ವಭಾವ, ನೀತಿ ಮಾತ್ರ ಬದಲಾಗಿಲ್ಲ. ಸದ್ಯದ ಸಿಎಂ ರಬ್ಬರಸ್ಟಾಂಪ್ ಆಗಿದ್ದಾರೆ. ರಾಜ್ಯದಲ್ಲಿ ಪ್ರವಾಹ ಬಂದೂ ಸಾಕಷ್ಟು ಜನರು ಮನೆ, ಬೆಳೆ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಸಿಎಂ ಬದಲಾವಣೆ ಮಾಡಿದ್ದು, ರಬ್ಬರ್ ಸ್ಟ್ಯಾಂಪ್ ತರಹ ಮತ್ತೊಬ್ಬರನ್ನ ಸಿಎಂ ಆಗಿ ಈಗ ತಂದು ಕುರಿಸಿದ್ದಾರೆ. ವಿಪಕ್ಷವಾದ ಕಾಂಗ್ರೆಸ್ ಜನರ ನೆರವಿಗೆ ಬಂದ್ರೆ. ಬಿಜೆಪಿಯರು ಮಾತಚರ ಅಧಿಕಾರ, ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೆಹಲಿಗೆ ಓಡಾಟ ನಡೆಸುತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲೂ ಸರ್ಕಾರ ಸೋತಿದೆ. ಪ್ರವಾಹ ನಿರ್ವಹಣೆಯಲ್ಲೂ ಎರಡು ಸರ್ಕಾರಗಳು ವಿಫಲವಾಗಿವೆ ಎಂದು ಕೀಡಿಕಾರಿದರು.

ಕೇಂದ್ರ ದಿಂದ ೩೦ ಸಾವಿರ ಕೋಟಿ ಜಿಎಸ್ ಟಿ ಹಣ ಬರಬೇಕಿದೆ. ಆದರೆ ಜಿಎಸ್ ಟಿ ಹಣ ತರೋದು ಬಿಟ್ಟು ಸಾರ್ವಜನಿಕ ವೆಚ್ಚ ಕಡಿಮೆ ಮಾಡಿ ಅಂತಾ ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಜನರ ಕಾಳಜಿ ಮುಖ್ಯವಾಗಿಲ್ಲ. ಈಗಾಗಲೇ ರಾಜ್ಯ ಪಕ್ಕದ ರಾಜ್ಯವಾದ ಕೇರಳದಲ್ಲಿ ಕೋವಿಡ್ ಹೆಚ್ಚಳವಾಗುತ್ತಿದೆ. ಅಲ್ಲಿಂದ ರಾಜ್ಯಕ್ಕೆ ವಿಸ್ತರಣೆ ಆಗುವ ಭೀತಿ ಇದೆ. ಆದ್ರು ಸರ್ಕಾರ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮ‌ ಕೈಗೊಳ್ಳುತ್ತಿಲ್ಲ. ಇನ್ನೊಂದು ಕಡೆ ಕೋವಿಡ್ ಲಸಿಕೆಗಳು ಸಿಗುತ್ತಿಲ್ಲ.
ರಾಜ್ಯಕ್ಕೆ ಕೇಂದ್ರದಿಂದ ಪ್ರವಾಹ ಪರಿಸ್ಥಿತಿಗೆ ಅನುದಾನ ಸಹ ಬಂದಿಲ್ಲ. ರಾಜ್ಯ ಎಂಪಿಗಳು ಅನುದಾನ ಬಿಡುಗಡೆ ಮಾಡಿಸುವುದರಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಕಳೆದ ಬಾರಿ ಪ್ರವಾಕ್ಕೆ ಬಂದ ಪ್ರಧಾನಿಯವರು ಇಂದೂ ಪ್ರವಾಹ ಬಂದರು ಈ ಕಡೆಗೆ ತೊರುಗಿಯು ನೋಡುತ್ತಿಲ್ಲ ಎಂದು ರಾಜ್ಯ ಕೇಂದ್ರ ಬಿಜೆಪಿ ವಿರುದ್ಧ ಹರಿಹಾಯ್ದರು.

*ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಓಬಿಸಿಯವರಿಗೆ ಮೀಸಲಾತಿ ನೀಡೋ ವಿಚಾರ*

ಅನಿವಾರ್ಯವಾಗಿ ನ್ಯಾಯಾಲಯದ ಆದೇಶ ಇರೋದ್ರಿಂದ‌ ಕೇಂದ್ರ ಸರ್ಕಾರ ಮೀಸಲಾತಿ ನೀಡುತ್ತಿದೆ. ಮೋದಿಯವರು ೭ ವರ್ಷದಿಂದ ಹಿಂದುಳಿದ ವಿರೋಧಿ ಆಗಿದ್ದಾರೆ. ನ್ಯಾಯಾಲಯದ ಆದೇಶದ ಭಯದಿಂದ ಮೀಸಲಾತಿ ಜಾರಿಮಾಡಿದೆ. ಬಿಜೆಪಿ ಯಾವತ್ತೂ ಹಿಂದುಳಿದವರಿಗೆ ಬೆಂಬಲ, ಸಹಾಯ ಮಾಡಿಲ್ಲ.
ಈ ಕುರಿತು‌ ಸೋನಿಯಾ ಗಾಂಧಿಯವರು ಪತ್ರ ಬರೆದಿದ್ದರು. ಆದ್ರೆ ಅವರು ಅದಕ್ಕೆ ಪ್ರತಿಕ್ರಿಯೆ ಸಹ ನೀಡಲಿಲ್ಲ. ಮದ್ರಾಸ್ ಹೈಕೋರ್ಟ್ ಗೆ ವಿದ್ಯಾರ್ಥಿ ಹೋದ ಮೇಲೂ ನ್ಯಾಯಾಲಯದ ಆದೇಶ ಪಾಲಿಸಿರಲಿಲ್ಲ ಎಂದು ಕುಟುಕಿದರು.

*ಆಸ್ಸಾಂ ಮಿಂಜೋರಾ ಪೊಲೀಸರ ಮಧ್ಯೆ ವಾರ್ ವಿಚಾರ*

ಆಸ್ಸಾಂ ಮಿಂಜೋರಾ ಸಿಎಂಗಳು ಟ್ವೀಟರ್ ಮೂಲಕ ಫೈಟ್ ಮಾಡುತ್ತಿದ್ದಾರೆ. ಆಸ್ಸಾಂ ಮಿಂಜೋರಾ ವಿಚಾರದಲ್ಲಿ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಇಬ್ಬರು ಸಿಎಂಗಳ‌ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದಾರೆ ಎಂದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]