Home / Top News / ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರಕಾರ ತಾರತಮ್ಯ

ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರಕಾರ ತಾರತಮ್ಯ

Spread the love

ಹುಬ್ಬಳ್ಳಿ : ನೆರೆ ಪರಿಹಾರ ವಿಚಾರದಲ್ಲಿ, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನ ಕೇವಲವಾಗಿ ನೋಡುತ್ತಿದೆ,,ಕರ್ನಾಟಕ ರಾಜ್ಯವನ್ನ ಅವರು ಮರೆತು ಬಿಟ್ಟಿದ್ದಾರೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲೆಂದು ಕರ್ನಾಟಕವನ್ನು ಕರೆಯುತ್ತಾರೆ.ಈ ರೀತಿಯ ವಾತಾವರಣವನ್ನು ಬಿಎಸ್, ಯಡಿಯೂರಪ್ಪನವರು ಸೃಷ್ಟಿ ಮಾಡಿದ್ದಾರೆ ಎಂದು ಬಿಜೆಪಿ ಸರಕಾರದ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಗರಂ ಆಗಿದ್ದಾರೆ.

ನಗರದಲ್ಲಿಂದು ಮಾತಾನಾಡಿದ ಅವರು,ಬಿಜೆಪಿ ಸರ್ಕಾರಕ್ಕೆ ಜನರ ಸಮಸ್ಯೆಗಳನ್ನ ಬಗೆಹರಿಸುವ ಆಸಕ್ತಿ ಇಲ್ಲ ಅವರ ಪಕ್ಷದ ಸ್ವಾರ್ಥ ಸಾಧನೆಗಾಗಿ ಇದನ್ನೆಲ್ಲಾ ಮಾಡ್ತಾ ಇದ್ದಾರೆ ಎಂದರು, ಇನ್ನೂ ನೆರೆ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ, ಗುಜರಾತ್ ಮತ್ತು ಬಿಹಾರ ರಾಜ್ಯದಲ್ಲಿ ನೆರೆ ಬಂದ್ರೆ ಪ್ರಧಾನಿ ತಕ್ಷಣ ಭೇಟಿ ನೀಡಿ ಪರಿಹಾರವನ್ನ ಘೋಷಣೆ ಮಾಡ್ತಾರೆ. ಕರ್ನಾಟಕ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ನೆರೆ ಬಂದಿದೆ ಆದ್ರೆ ಕೇಂದ್ರದಿಂದ ಕರ್ನಾಟಕಕ್ಕೆ ಒಂದು ಬಿಡಿಗಾಸನ್ನ ಇನ್ನೂ ಕೊಟ್ಟಿಲ್ಲ.
ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ರಚನೆ ನಾಟಕ ನಡೆಯುತ್ತಿದೆ.
ಯಾವ ದಿಕ್ಕಿನಲ್ಲಿ ಕರ್ನಾಟಕ ರಾಜ್ಯ ಸಾಗುತ್ತಿದೆ.? ಎಂದು ಪ್ರಶ್ನಿಸಿ ಈ ಸರಕಾರ ಜನ ಪರ ಸರಕಾರ ಅಲ್ಲಾ, ಪ್ರಜಾಪ್ರಭುತ್ವ ವಿರುದ್ಧವಾಗಿ ಬಂದ ಸರಕಾರ ಎಂದು ಕಿಡಿ ಕಾರಿದರು!

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]