ಧಾರವಾಡ್ : ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ಧಾರವಾಡಕ್ಕೆ ಕರೆದುಕೊಂಡ ಬರಲಾಯಿತು. ಬೆಳಗಾವಿ ಹಿಂಡಲಗಾ ಜೈಲಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನೇರವಾಗಿ ಧಾರವಾಡ ಉಪನೋಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಬಂದು ಕುಟುಂಬಸ್ಥರಿಗೆ ಜಿಪಿಎ ನೀಡಲಾಯಿತು.
ಈ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿಯವರು ಕುಟುಂಬದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರಿಗೆ ಜಿಪಿಎ ನೀಡಲು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಕಣ್ಗಾವಲಿನಲ್ಲಿ ಆಗಮಿಸಿದ ಮಾಜಿ ಸಚಿವ ವಿನಯ ತಮ್ಮ ವಿನಯ ಡೈರಿ ಸೇರಿದಂತೆ ಕುಟುಂಬದ ವ್ಯವಹಾತ ಹಾಗೂ ಬ್ಯಾಕ್ ವ್ಯವಹಾರಗಳ ಕುರಿತು ಕುಟುಂಬಸ್ಥರಿಗೆ ಜಿಪಿಎ ನೀಡಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡಕ್ಕೆ ಆಗಮಿಸುತ್ತಿರುವ ಸುದ್ದಿ ತಿಳಿದು, ವಿನಯ ಸಹೋದರ ವಿಜಯ ಕುಲಕರ್ಣಿ, ಹಾಗೂ ಕೈ ಪಕ್ಷದ ಮುಖಂಡರು ಸೇರಿದಂತೆ ಅಭಿಮಾನಿಗಳು ಧಾರವಾಡ ಮಿನಿ ವಿಧಾನಸೌಧದಲ್ಲಿ ಜಮಾವಣೆಗೊಂಡಿದರು. ಕೆಲವು ಅಭಿಮಾನಿಗಳನ್ನು ಪೊಲೀಸರು ಹೊರಗೆ ಕಳುಹಿಸಲು ಹರಸಹಾಸ ಪಡಬೇಕಾಯಿತ್ರು.
ಕುಟುಂಬಸ್ಥಿರಿಗೆ ಜೆಪಿಎ ನೀಡಿದ ಬಳಿಕ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು ಮತ್ತೆ ಪೊಲೀಸ ಬಿಗಿ ಭದ್ರತೆಯಲ್ಲಿ ಮರಳಿ ಬೆಳಗಾವಿ ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋಗಲಾಯಿತ್ತು.