ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಲಿಂಗಾಯತ ಸಮಾಜವನ್ನು ಸುವರ್ಣಯುಗಕ್ಕೆ ಕೊಂಡೊಯ್ದಿದ್ದ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡ್ಯೂರಪ್ಪನವರ ಪರೋಕ್ಷ ಪದಚ್ಯುತಿ ಇಂದು ನಡೆದಿದ್ದು ಯಡಿಯೂರಪ್ಪನವರು ಸ್ವ ಮನಸ್ಸಿನಿಂದ ರಾಜೀನಾಮೆ ಕೊಟ್ಟಿರುತ್ತೇನೆ ಅಂತ ಮಾಧ್ಯಮದಲ್ಲಿ ಹೇಳಿದ್ದಾರೆ. ಅದು ಶುದ್ಧ ಸುಳ್ಳುಬಿ ಜೆ ಪಿ ಹೈಕಮಾಂಡ್ ನವರು ಲಿಂಗಾಯತೇತರ ವಿರೋಧಿ ಮುಖ್ಯಮಂತ್ರಿಗಳನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಾಡಿರುವ ಕುತಂತ್ರಕ್ಕೆ ಮಾನ್ಯ ಯಡಿಯೂರಪ್ಪನವರು ಬಲಿಯಾಗಿದ್ದು ಲಿಂಗಾಯತ ಸಮಾಜ ಭಾರತೀಯ ಜನತಾ ಪಕ್ಷಕ್ಕೆ ಮುಖವನ್ನು ತೋರಿಸದೇ ಇನ್ನು ಮುಂದೆ ಬೆನ್ನು ತೋರಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ನಾಡಿನ ವಿವಿಧ ಭಾಗದಿಂದ ಆಗಮಿಸಿದ ಮಠಾಧೀಶರ ಒತ್ತಾಯಕ್ಕೂ ಸೊಪ್ಪು ಹಾಕದೇ ಯಡಿಯೂರಪ್ಪನವರ ರಾಜೀನಾಮೆಯನ್ನು ಪಡೆಯಲು ಮುಂದಾಗಿರುವ ಭಾರತೀಯ ಜನತಾ ಪಕ್ಷಕ್ಕೆ ಕನ್ನಡನಾಡಿನ ಲಿಂಗಾಯತ ವರ್ಗ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ಗಂಗಾಧರ ದೊಡವಾಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
