ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಕ್ಷೀಪ್ರಗತಿಯ ಬದಲಾವಣೆಗಳು ನಡೆಯುತ್ತಿರುವ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನ ಭೇಟಿಯಾಗಲು ಮಯೂರಿ ಎಸ್ಟೇಟ್ ನಲ್ಲಿರುವ ಮನೆಗೆ ದಿಡೀರ್ ತೆರಳಿದ್ದಾರೆ.
ಮುಖ್ಯಮಂತ್ರಿಯ ಬದಲಾವಣೆ ದಿನಾಂಕ ಸಮೀಪಿಸುತ್ತಿದ್ದ ಹಾಗೇ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದು ಬೆಳಿಗ್ಗೆಯಷ್ಟೇ ನನಗೆ ಸಿಎಂ ವಿಷಯವಾಗಿ ಏನೂ ಗೊತ್ತಿಲ್ಲವೆಂದಿದ್ದ ಪ್ರಲ್ಹಾದ ಜೋಶಿಯವರ ಮನೆಗೆ ಗೃಹ ಸಚಿವರು ಭೇಟಿ ನೀಡಿದ್ದು, ಮಹತ್ವ ಪಡೆದಿದೆ.
ಕೆಲವೇ ನಿಮಿಷಗಳಲ್ಲಿ ಹಿಂದೆ ವಿಜಯನಗರದ ಗೃಹ ಸಚಿವರ ಮನೆಯಿಂದ ಪ್ರಲ್ಹಾದ ಜೋಶಿಯವರ ಮನೆಯವರೆಗೆ ಪೊಲೀಸ್ ನಿಯೋಜನೆ ಮಾಡಲಾಗಿದೆ