ಹುಬ್ಬಳ್ಳಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಈಗ ನಮ್ಮ ಮುಖ್ಯಮಂತ್ರಿ ಬಿ ಎಸ್ ವೈ ಅವರು ಹೇಳಿದ್ದಾರೆ. ಅಲ್ಲದೆ ಪಕ್ಷದ ವರಿಷ್ಠರ ತೀರ್ಮಾಣಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷ, ಹಾಗು ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ಸ್ಪಷ್ಟತೆ ಇಲ್ಲ. ಹಾಗಾಗಿ ವೆಟ್ ಆ್ಯಂಡ್ ವಾಚ್ ಎಂದು ಸಚಿವ ಜಗದೀಶ ಶೆಟ್ಟರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರೆಯೆ ನೀಡುದ ಅವರು, ರಾಜ್ಯದ ನಾಯಕತ್ವ ಬದಲಾವಣೆ ವಿಚಾರವಾಗಿ ನಮ್ಮ ವರಿಷ್ಠರು ನನ್ನ ಜೊತೆಗೆ ಮಾತನಾಡಿಲ್ಲ. ಹಾಗಾಗಿ ಸಿಎಂ ಬದಲಾವಣೆಯ ಕುರಿತಂತೆ ನನಗೆ ವೈಕ್ತಿಕವಾಗಿ ಯಾವುದೇ ಮಾಹಿತಿಯಿಲ್ಲ. ಇನ್ನೂ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದು ಕಾದು ನೋಡಬೇಕಾಗಿದೆ ಎಂದರು.
ನಾನು ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರಲಿಲ್ಲ. ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ದಿವಂಗತ ಸುರೇಶ ಅಂಗಡಿಯವರು ಪತ್ಮಿಯರು ಮಂಗಳಾ ಅಂಗಡಿಯವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದರು, ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸಲು ಹಾಗೂ ನನ್ನ ಇಲಾಖೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾಯಕರ ಜೊತೆಗೆ ಚರ್ಚಿಸಲು ದೆಹಲಿಗೆ ಹೋಗಿದ್ದು ಅಷ್ಟೇ ಎಂದು ಹೇಳಿದರು.
ಕೇಂದ್ರದಲ್ಲಿ ರಾಮನಾಥ ಸಿಂಗ್ ಹಾಗೂ ಸ್ಥಳಿಯ ಎಂಪಿಯಾದ ಒ್ರಹ್ಲಾದ್ ಜೋಶಿಯವರನ್ನು ಬಿಟ್ಟು ಬೇರೆಯಾರೊಬ್ಬ ನಾಯಕರನ್ನು ನಾನು ಭೇಟಿ ಮಾಡಿಲ್ಲ. ರಾಜನಾಥ ಸಿಂಗ್‌ರವರನ್ನು ಭೇಟಿ ಮಾಡಿ ಡಿಫೆನ್ಸ್ ಕ್ಲಸ್ಟರ್‌ದಲ್ಲಿ ಹೆಚ್ಚಿನ ಅವಕಾಶ ನೀಡುವ ಕುರಿತು ಚರ್ಚೆ ನಡೆಸಿದ್ದೇವೆ ಅದನ್ನು ಬಿಟ್ಟು ಬೇರೆ ಯಾವ ವಿಚಾರವನ್ನು ನಾನು ಚರ್ಚೆ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
*ಸಂಪುಟದಿಂದ ಶೆಟ್ಟರ್ ಕೈಬಿಡುವ ಆಡಿಯೋ ವಿಚಾರ*
ನಳಿನ್ ಕುಮಾರ್ ಕಟಿಲ್ ಈಗಾಗಲೇ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಹಂತದಲ್ಲಿ ಇರುವುದರಿಂದ ಅದರ ಬಗ್ಗೆ ಈಗ ಚರ್ಚೆ ಮಾಡುವುದು ಸರಿಯಲ್ಲ ಎಂದರು.