ಹುಬ್ಬಳ್ಳಿ : ಸಮಗ್ರ ಕರ್ನಾಟಕದ ಲಿಂಗಾಯತರ ನಾಯಕತ್ವ ವಹಿಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕದ ಎಲ್ಲಾ ಭಾಗದ ಲಿಂಗಾಯತ ಲಿಂಗಾಯತ ಮುಖಂಡರುಗಳಿಗೆ ಯೋಗ್ಯ ಸ್ಥಾನಮಾನ ಕೊಟ್ಟು ಪುರಸ್ಕರಿಸಿದ್ದಾರೆ. ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಉತ್ತರ ಹಾಗೂ ಲಿಂಗಾಯತ ಸಮಾಜದ ಹಿರಿಯ ಮುಖಂಡ ಶ್ರೀ ಗಂಗಾಧರ ದೊಡವಾಡ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಆಡಳಿತಕ್ಕೆ ಬರಲು ಕಾರಣೀಭೂತರಾದ ಯಡಿಯೂರಪ್ಪನವರು ಮಠಮಾನ್ಯಗಳಿಗೆ ಧಾರ್ಮಿಕ ಸಂಘ-ಸಂಸ್ಥೆಗಳಿಗೆ ಅಲ್ಲದೇ ಲಿಂಗಾಯತ ಸಮಾಜಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪಿಸಿ ಅನೇಕರಿಗೆ ರಾಜಕೀಯವಾಗಿ ಅಸ್ತಿತ್ವವನ್ನೂ ಪುನರ್ವಸತಿ ಯನ್ನೂ ಮಾಡಿದ್ದು ಕಣ್ಣೆದುರಿಗೆ ಇರುವಾಗ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮುಖಂಡರುಗಳು ಮೌನವಹಿಸಿರುವುದು ಅಚ್ಚರಿಯೆನಿಸುತ್ತದೆ ! ಅಂದರೆ ಯಡಿಯೂರಪ್ಪನವರು ಲಿಂಗಾಯತ ನಾಯಕರಲ್ಲವೇ ಎಂಬಂತೆ ನಡೆದುಕೊಳ್ಳುತ್ತಿರುವ ಇವರಿಗೆ ಇವರ ಸ್ಥಾನಮಾನ ಹೋದಾಗ ಈ ಭಾಗದ ಲಿಂಗಾಯತರು ಇವರ ಹಿಂದೆ ಧ್ವನಿಯೆತ್ತುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ಪ್ರಶ್ನಿಸಿದ್ದಾರೆ ಲಿಂಗಾಯತ ನಾಯಕರುಗಳನ್ನು ಬೆಳೆಸಿದ ಕೀರ್ತಿ ಯಡಿಯೂರಪ್ಪನವರಿಗೆ ಇದ್ದರೂ ಸಹ ಪ್ರತ್ಯುಪಕಾರದ ಎರಡು ಮಾತನ್ನು ಸಹ ಎಲ್ಲಿಯೂ ಮಾತನಾಡದೆ ಮೌನವಾಗಿರುವ ಇವರನ್ನು ಸಮಯ ಸಾಧಕರೆಂದು ಗುರುತಿಸಬಹುದಾಗಿದೆ. ರಾಜಕೀಯದಲ್ಲಿ ಏಳುಬೀಳುಗಳು ಸಹಜ ಆದರೆ ಸಹಾಯ ಮಾಡಿದವರಿಗೆ ಎದೆಗೊಟ್ಟು ನಿಲ್ಲುವುದು ಧರ್ಮವಾಗಿದೆ ಎಂದು ಗಂಗಾಧರ ದೊಡವಾಡ ಹೇಳಿಕೆ ನೀಡಿದ್ದಾರೆ.
