ಹುಬ್ಬಳ್ಳಿ- ವೃದ್ಧನೊಬ್ಬ ರಸ್ತೆ ದಾಟುವಾಗ ಕಾರವೊಂದು ಗುದ್ದಿದ ಪರಿಣಾಮ, ವೃದ್ಧನಿಗೆ ಗಂಭೀರವಾದ ಘಟನೆ, ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಮಾರುತಿ ನಗರದ ಬಳಿ ನಡೆದಿದೆ.
ಹೌದು,,,, ನವಲಗುಂದ ತಾಲ್ಲೂಕಿನ ಕೀರೆಸೂರ ಗ್ರಾಮದ ಬಾಬು ಎಂಬ ವೃದ್ಧನೊಬ್ಬ ರಸ್ತೆ ದಾಟುವ ಸಂದರ್ಭದಲ್ಲಿ, ಬ್ಲ್ಯಾಕ್ ಕಲರ್ ಇರುವ ಕಾರವೊಂದು ಡಿಕ್ಕಿ ಹೊಡೆದಿದೆ. ಇನ್ನು ಡಿಕ್ಕಿ ಹೊಡೆದ ನಂತರ ಕಾರ್ ನಿಲ್ಲಿಸದೇ ಸ್ಥಳದಿಂದ ಕಾಲಕಿತ್ತು ಚಾಲಕ ಕಾರ ಸಮೇತ ಪರಾರಿಯಾಗಿದ್ದಾನೆ. ಇನ್ನು ಸ್ಥಳೀಯರ ಸಹಾಯದಿಂದ ವೃದ್ಧನನ್ನು ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಘಟನೆ ಬಗ್ಗೆ ವಿವರ ಪಡೆದುಕೊಂಡು, ಕಾರ್ ಪತ್ತೆಗಾಗಿ ಶೋದ ನಡೆಸಲು ಮುಂದಾಗಿದ್ದಾರೆ.