ಹುಬ್ಬಳ್ಳಿ : ಸಂಸದರಾದ ಸುಮಲತಾ ಅಂಬರೀಶ್ ಅವರು ಈ ಹಿಂದೆ ಕೆಆರ್‌ಎಸ್ ಡ್ಯಾಮ್ ಬೀರುಕು ಬಿಟ್ಟ ವಿಚಾರ ಮಾತಾಡಿದರು, ಆದರೆ ಈಗ ಆ ವಿಚಾರ ಬಿಟ್ಟು, ಸುಮಲತಾ ಮತ್ತು ಹೆಚ್‌ಡಿಕೆಯವರ ನಡುವೆ ಮಾತಿನ ಫೈಟಿಂಗ್ ಶುರುವಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ ಹೇಳಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ಕೂಡಾ ಸಂಸದರಾದ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್ ಡಿ ಕೆ ಅವರ ನಡುವೆ ನಡೆಯುತ್ತಿರುವ ಮಾತಿನ ಸಮರವನ್ನು ಗಮನಿಸುತ್ತಿದ್ದೇನೆ, ಕಳೆದ ಎರಡು ಮೂರು ದಿನಗಳಿಂದ ಮುಂಜಾನೆಯಿಂದ ಸಂಜೆಯವರೆಗೆ ಸಿರಿಯಲ್ ಆಗಿ ಹೋಗಿದೆ. ಮಾಧ್ಯಮವುಗಳು ಆ ವಿಚಾರವನ್ನು ತೋರಿಸುವುದು ಕಡಿಮೆ ಮಾಡಿದಲ್ಲಿ, ಅದೂ ತಾನಾಗಿಯೇ ಕಡಿಮೆಯಾಗುತ್ತದೆ, ರಾಜ್ಯದಲ್ಲಿ ನೂರೆಂಟು ವಿಚಾರಗಳು ಇವೆ ಅವುಗಳ ಬಗ್ಗೆ ಮಾಧ್ಯಮಗಳು ಗಮನಹರಿಸಬೇಕು ಎಂದರು.
ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಸಫರ್ ಆಗುತ್ತಿದ್ದೇವೆ ಇನ್ನೂ ಕೂಡಾ ರಾಜ್ಯದಲ್ಲಿ ಕೊರೊನಾ 100ಪ್ರತಿಶತ ಕಡಿಮೆಯಾಗಿಲ್ಲಾ, ಇದರ ನಡುವೆ ಈಗ ಅಧಿವೇಶನ ನಡೆಸಬೇಕಾಗಿದೆ. ಬೆಂಗಳೂರಿನಲ್ಲಿ ಅಧಿವೇಶನ ನಡೆಸಬೇಕೋ ಅಥವಾ ಬೇಡಾ ಅನ್ನುವ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ, ಬೆಳಗಾವಿ ಅಥವಾ ಬೆಂಗಳೂರಿನಲ್ಲಿ ಅಧಿವೇಶನ ನಡೆಸಬೇಕು ಎನ್ನುವುದರ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ಇನ್ನೂ ನಡೆದಿಲ್ಲಾ, ನಾಳೆ ಮುಖ್ಯಮಂತ್ರಿ ಭೇಟಿಯಾಗಿ ಇದರ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.