Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಬಾಲಕನ ಮೇಲೆ ನಾಯಿಗಳ ದಾಳಿ: ಸ್ಥಳದಲ್ಲೇ ಬಾಲಕ ಸಾವು

ಬಾಲಕನ ಮೇಲೆ ನಾಯಿಗಳ ದಾಳಿ: ಸ್ಥಳದಲ್ಲೇ ಬಾಲಕ ಸಾವು

Spread the love

ಧಾರವಾಡ್ : ನಾಯಿಗಳು ಹಿಂಡು ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದ ಪರಿಣಾಮ ಆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಹೊರವಲಯದ ನವಲೂರು ಗ್ರಾಮದ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬಾಬುಲ್ ರಾಠೋಡ್ ಎಂಬ ಆರು ವರ್ಷದ ಬಾಲಕನೇ ನಾಯಿಗಳ ದಾಳಿಯಿಂದ ಮೃತಪಟ್ಟ ಬಾಲಕ.

ಬೆಳಿಗ್ಗೆ ಪೋಷಕರು ತಿಂಡಿ ತಿನ್ನಲೆಂದು ಬಾಲಕನನ್ನು ಶೆಡ್‌ನಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ ಏಳೆಂಟು ನಾಯಿಗಳು ಆ ಬಾಲಕನ ಮೇಲೆ ಏಕಾಏಕಿ ದಾಳಿ ನಡೆಸಿವೆ. ಅವುಗಳ ದಾಳಿಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About Santosh Naregal

Check Also

ಡಾ.ರಾಜಕುಮಾರ್ ಅಭಿಮಾನಿಗಳಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …

Leave a Reply

Your email address will not be published. Required fields are marked *

[the_ad id="389"]