ಹುಬ್ಬಳ್ಳಿ ಯಲ್ಲಿ ಇಬ್ಬರು ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ಸ್ವಚ್ಚತಾ ಕಾರ್ಮಿಕರ ಬಿಲ್ ಮಾಡುವ ವಿಚಾರ ಕುರಿತು ಹದಿನೆಂಟು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು.ಈ ಒಂದು ವಿಚಾರ ಕುರಿತು ಸ್ವಚ್ಚತಾ ಕಾರ್ಮಿಕರು ಎಸಿಬಿ ಅಧಿಕಾರಿ ಗಳಿಗೆ ದೂರನ್ನು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ವಲಯ ಕಚೇರಿ 10 ರಲ್ಲಿ ಹಣವನ್ನು ತಗೆದುಕೊಳ್ಳುವಾಗ ಎಸಿಬಿ ಅಧಿಕಾರಿ ಗಳು ಟ್ರ್ಯಾಪ್ ಮಾಡಿದ್ದಾರೆ. ತಜಮೀರ್ ಶಿರಸಿ ಮತ್ತು ನೂರಂದಪ್ಪ ಭಜಂತ್ರಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.ಸಧ್ಯ ಹದಿನೆಂಟು ಸಾವಿರ ರೂಪಾಯಿ ಯೊಂದಿಗೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.