ಹುಬ್ಬಳ್ಳಿ : ಹೊಸ ವಾಹನ ಖರೀದಿಸಿದವರು ಸಾಮಾನ್ಯವಾಗಿ ಮಠ-ಮಂದಿರದಲ್ಲಿ ಪೂಜೆ ಮಾಡಿಸುತ್ತಾರೆ. ಆದರೆ, ಇಲ್ಲೊಬ್ಬರು ವ್ಯಕ್ತಿ ತಮ್ಮ ಹೊಸ ವಾಹನವನ್ನು ಸ್ಮಶಾನದಲ್ಲಿ ಪೂಜೆ ನೆರವೇರಿಸಿ ಖುಷಿಪಟ್ಟಿದ್ದಾರೆ.
ಹುಬ್ಬಳ್ಳಿಯ ಉಣಕಲ್ ಗ್ರಾಮದ ಕಲ್ಲಪ್ಪ ವಾಲಿಕಾರ ಅವರು ವಿದ್ಯಾನಗರ ರುದ್ಧಭೂಮಿಯಲ್ಲಿ ‘ಟಾ ನೆಕಾನ್ ವಾಹನದ ಪೂಜೆ ನೆರವೇರಿಸಿ ಅಹ್ವಾನಿತರಿಗೆ ಸಿಹಿ ಹಂಚಿದರು. ಸ್ಮಶಾನದ ಬಗ್ಗೆ ಜನರಲ್ಲಿ ಕೀಳು ಭಾವನೆ ಇದೆ ಮೌಲ್ಯಗಳನ್ನು ಹೋಗಲಾಡಿಸುವ ಉದ್ದೇಶದಿಂದ ಸ್ಮಶಾನದಲ್ಲಿಯೇ ಗಾಡಿ ಪೂಜೆ ಮಾಡಿಸಿದ್ದೇವೆ. ಇದಲ್ಲದೆ, ಸ್ಮಶಾನದಲ್ಲಿ ಗಿಡಗಳನ್ನು ನೆಟ್ಟು ಈ ಕರಣವನ್ನು ಸ್ಮರಣೀಯವಾಗಿಸಿದ್ದೇವೆ ಎನ್ನುತ್ತಾರೆ ಕಲ್ಲಪ್ಪ.
ಇನ್ನೂ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಸ್ಮಶಾನದ ಬಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.