ಹುಬ್ಬಳ್ಳಿ : ಇಂದು ಅಂತಾರಾಷ್ಟ್ರೀಯ ಯೋಗ ದಿನ ನಾವು ನಿವೇಲ್ಲರೂ ಪ್ರತಿಯೊಬ್ಬರು ಯೋಗ ಮಾಡಿದ್ದೇವೆ ಅದರಂತೆ ಆ ಪೋಟೋ ಫೇಸ್ಬುಕ್, ವಾಟ್ಸಾಪ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇವೆ ಅಲ್ವೇ.
ಆದ್ರೇ ಇದೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಲ್ಲೋಬ್ಬ ವರ ಮದುವೆ ಮಂಟಪದಲ್ಲೇ ತಾನು ಯೋಗ ಮಾಡಿದ್ದಲ್ಲದೆ ಮದುವೆಗೆ ಬಂದಂತಹ ಅತಿಥಿಗಳಿಗೂ ಯೋಗ ಮಾಡಿಸಿ ಅಂತಾರಾಷ್ಟ್ರೀಯ ಯೋಗ ದಿನದ ಮಹತ್ವ ಸಾರಿದ್ದಾರೆ.
ಎಸ್.! ಇಷ್ಟೇಲ್ಲಾ ನಡೆದಿದ್ದು ಎಲ್ಲಿ ಅಂದ್ರಾ ಇಲ್ಲೇ ಸ್ವಾಮಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ವೈಭವಿ ನಗರದಲ್ಲಿ ಇಲ್ಲಿನ ಅಂತಾರಾಷ್ಟ್ರೀಯ ಯೋಗ ಪಟು ವರ ಡಾ.ಶ್ರೀಧರ ಹೊಸಮನಿ ವಧು ಗಾಯತ್ರಿ ತಮ್ಮ ಮದುವೆಯನ್ನು ಅಂತಾರಾಷ್ಟ್ರೀಯ ಯೋಗದ ದಿನವೇ ನಿಶ್ಚಯ ಮಾಡಿಕೊಂಡಿದ್ದಲ್ಲದೆ ಮದುವೆ ಮಂಟಪದಲ್ಲಿ ಯೋಗ ಮಾಡಿ ಯೋಗ ಲಾಭಗಳನ್ನು ಮದುವೆ ಬಂದವರಿಗೂ ತಿಳಿಸಿಕೊಟ್ಟಿದ್ದಾರೆ.
ಇವರ ಕಾರ್ಯಕ್ಕೆ ಮದುವೆಗೆ ಬಂದ ಅತಿಥಿ ಸಂಬಂಧಿಕರಷ್ಟೇ ಅಲ್ಲಾ, ಇಡೀ ಗ್ರಾಮದ ಜನರೇ ಬೇಷ್ ಎಂದಿದ್ದು ಸಧ್ಯಕ್ಕೆ ಮದುವೆ ಮಂಟಪದಲ್ಲಿ ಯೋಗ ಮಾಡಿದ ಮೊದಲ ಅಂತಾರಾಷ್ಟ್ರೀಯ ಯೋಗ ಪಟು ಬಹುಶಃ ಈ ವರ ಡಾ.ಶ್ರೀಧರ ಹೊಸಮನಿ ಇರಬೇಕು.