ಗೋಕಾಕ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಪ್ರವಾಹಕ್ಕೆ ಸಂಬಂದಿಸಿದಂತೆ ಕರೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ರಮೇಶ ಜಾರಕಿಹೋಳಿಯವರು ಈಗಲು ನಾನು ಸಚಿವನಿದ್ದ ಹಾಗೆ ಈಗಲೂ ಅದೆ ರೀತಿ ಕೆಲಸ ಮಾಡುತ್ತೇನೆ,ಈಶ್ವರಪ್ಪನವರು ಬಹಳ ಒಳ್ಳೆಯವರು.ಹಿಂದೂಳಿದ ವರ್ಗದ ನಾಯಕನ ವಿರುದ್ದ ಕೆಲವರು ಷಡ್ಯಂತ್ರ ಮಾಡುತಿದ್ದಾರೆ, ಅದಲ್ಲದೆ ಯಡಿಯೂರಪ್ಪನವರೆ ಹೊಸ ಯಡಿಯೂರಪ್ಪನಾಗಿ ಮುಖ್ಯಮಂತ್ರಿಯಾಗಿ ರಾಜ್ಯದ ತುಂಬ ಕೆಲಸ ಮಾಡುತ್ತಾರೆಂದು ಮಾದ್ಯಮದವರಿಗೆ ಉತ್ತರಿಸಿ ಯೋಗಿಶ್ವರ ಅವರು ನನಗೆ ಆತ್ಮಿಯ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಇಷ್ಟು ದಿನ ಸುಮ್ಮನಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದೀಗ ಈಶ್ವರಪ್ಪ ಅವರ ಹೇಳಿಕೆಯನ್ನ ಪರೋಕ್ಷವಾಗಿ ಸಮರ್ತಿಸಿಕೊಂಡು ಹೇಳಿಕೆ ನೀಡಿದ್ದಾರೆ. ಇನ್ನು ಪ್ರವಾಹ ಬರುವ ಮುನ್ಸೂಚನೆ ಇದ್ದು ಇದಕ್ಕೆ ತಯಾರಿ ನಡೆಸುವಂತೆ ಕೂಡ ಸೂಚನೆ ನೀಡಿದ್ದಾರೆ
ಕೊವಿಡ್ ಸಮಯದಲ್ಲಿ ತಮ್ಮ ಜೀವದ ಹಂಗನ್ನು ಮರೆತು ಕೊರೊನಾ ಹರಡದಂತೆ ಶ್ರಮಿಸಿದ ಆಶಾ ಕಾರ್ಯಕರ್ತರ ಸೇವೆ ಗುರುತಿಸಿ ಮಾಜಿ ಸಚಿವ ರಮೇಶ ಜಾರಕಿಹೋಳಿ ಮತ್ತು ನೂತನ ಬೆಳಗಾವಿ ಲೊಕಸಭಾ ಸದಸ್ಯರಾದ ಮಂಗಲ ಅಂಗಡಿಯವರ ಪುತ್ರಿ, ಗೋಕಾಕದ ರಮೇಶ ಜಾರಕಿಹೋಳಿಯವರ ಗೃಹ ಕಚೇರಿಯಲ್ಲಿ ದಿನಶಿ ಕಿಟ್ ವಿತರಿಸಿದರು