ಹುಬ್ಬಳ್ಳಿ ; 15 ತಿಂಗಳಿಂದ ಚಿತ್ರ ಮಂದಿರಗು ಮುಚ್ಚಿದ್ದರಿಂದ ತಾವು ಕಷ್ಟದಲ್ಲಿದ್ದು ನಮಗೆ ಸಹಾಯ ಬೇಕು ಎಂದು ನಟ ರಾಕಿಂಗ್ ಸ್ಟಾರ್ ಸೇರಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಾನಿಗಳಲ್ಲಿ ಮನವಿ ಮಾಡಿದ್ದಾರೆ.
ವೇತನ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲಿದ್ದು ಬದುಕು ನಡೆಸುವುದು ಕಷ್ಟಕರವಾಗಿದೆ. ಕಾರಣ ನಟ ಯಶ್ ಅವರು ಚಲನ ಚಿತ್ರ ಕಲಾವಿದರಿಗೆ , ತಂತ್ರಜ್ಞರಿಗೆ , ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಸಂತಸವಾಗಿದ್ದು ತಮಗೂ ಸಹಾಯ ಮಾಡಬೇಕು. ನಾವು ಕೂಡ ಕಲಾವಿದರ ಚಿತ್ರ ಪ್ರದರ್ಶನದಲ್ಲಿ ನಾವು ಕಷ್ಟಪಡುತ್ತೆವೆ ಕಾರಣ ಈ ವೃತ್ತಿ ಬಿಟ್ಟರೆ ನಮಗೆ ಬೇರೆ ಯಾವ ವೃತ್ತಿ ಸಹ ಬರಲ್ಲ ಆದ್ದರಿಂದ ನಮಗೂ ಕೂಡ ಆರ್ಥಿಕವಾಗಿ ನೆರವಾಗಬೇಕು ಎಂದು ಹುಬ್ಬಳ್ಳಿ ರೂಪಂ ಚಿತ್ರಮಂದಿರದ ಸಿಬ್ಬಂದಿಗಳು ಯಶ್ ಅವರಲ್ಲಿ ಮನವಿ ಮಾಡಿದ್ದಾರೆ.ಈಗಾಗಲೇ ಬೆಂಗಳೂರಿನಲ್ಲಿ
ಚಿತ್ರರಂಗದ ಒಕ್ಕೂಟದ ವತಿಯಿಂದ ಕಾರ್ಮಿಕರ ಸಹಾಯಕ್ಕೆ ಅಲ್ಲಿನ ಒಕ್ಕೂಟದ ಅಂಗ ಸಂಸ್ಥೆಗಳು ದಿನಸಿ, ಸಾಲ ಇತ್ಯಾದಿ ಅಗತ್ಯತೆ ಪೂರೈಸಿವೆ. ಸ್ಟಾರ್‌ಗಳು ಅವರ ನೆರವಿಗೆ ಬಂದಿವೆ. ಆದರೆ, ಚಿತ್ರಮಂದಿರಗಳಲ್ಲಿ ನಮಲ್ಲಿ ದುಡಿಯುವ ವರ್ಗಕ್ಕೆ ಯಾರು ಸಹಾಯಹಸ್ತ ಚಾಚಿಲ್ಲ. ಕೆಲವು ಬೆರಳೆಣಿಕೆ ಚಿತ್ರಮಂದಿರಗಳ ಮಾಲಿಕರು ಸಂಘ ಸಂಸ್ಥೆಗಳವರು ಸ್ವತಃ ತಮ್ಮ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ನೆರವಿಗೆ ಧಾವಿಸಿದ್ದಾರೆ. ಆದರೆ, ಕೆಲವು ಚಿತ್ರಮಂದಿರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ನೆರವಿಗೆ ಯಾರೂ ಆಗಿಲ್ಲ ಎಂಬ ಅಳಲು ತೊಡಿಕೊಂಡರು.