ಹುಬ್ಬಳ್ಳಿ:-ಕೊರೊನಾ ಸಂದರ್ಭದಲ್ಲಿ ಸರಕಾರ ವಿದ್ಯುತ್ ಧರ ಏರಿಕೆ ಮಾಡಿದ್ದು ಖಂಡನೀಯ ಕೂಡಲೇ ರಾಜ್ಯ ಸರಕಾರ ವಿದ್ಯುತ್ ದರ ಕಡಿಮೆ ಮಾಡಬೇಕು ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ರಿಪಬ್ಲಿಕ್ ಪಾರ್ಟಿ ಆಫ ಇಂಡಿಯಾ ಪಕ್ಷದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ತೋಟಗಿ ಎಚ್ಚರಿಕೆ ನೀಡಿದರು
ನಗರದಲ್ಲಿಂದು ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿ ನಂತರ ಮಾತಾನಾಡಿದ ಅವರು, ಕೊರೊನಾ ಹಾವಳಿಗೆ ತತ್ತರಿಸಿರುವ ಸಾರ್ವಜನಿಕರು ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ,ಇದರ ನಡುವೆಯೂ ಸರಕಾರ ಪೆಟ್ರೋಲ್ ಹಾಗೂ ವಿದ್ಯುತ್ ದರ ಏರಿಕೆ ಮಾಡಿದ್ದು ಎಷ್ಟರಮಟ್ಟಿಗೆ ಸರಿ,ಸರಕಾರ ನಡೆ ಸರಿಯಲ್ಲ, ಆದ್ದರಿಂದ ಕೂಡಲೇ ರಾಜ್ಯಸರ್ಕಾರ ತಮ್ಮ ನಿಲುವು ಬದಲಿಸಬೇಕು,ಮತ್ತು ಸರಕಾರ ಜನ ಪರ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.