ಹುಬ್ಬಳ್ಳಿ : ಸಿಎಂ ಬದಲಾವಣೆ ವಿಚಾರವಾಗಿ ನಾನೇನೂ ಕಾಮೆಂಟ್ ಮಾಡೋದಿಲ್ಲ. ಸಿಎಂ ಅವರು ಏನು ಹೇಳಿದ್ದಾರೋ ಆ ವಿಚಾರವಾಗಿ ಏನೇ ಪ್ರಶ್ನೆಗಳಿದ್ದರೂ ಸಿಎಂ ಅವರನ್ನೇ ಕೇಳಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರವಾಗಿ ಯಾರೂ ಸಹಿ ಸಂಗ್ರಹಕ್ಕೆ ಮುಂದಾಗಿಲ್ಲ. ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರ ಇಲಾಖೆಯ ಹಣ ಬಿಡುಗಡೆ ವಿಚಾರವಾಗಿ ಸಹಿ ಸಂಗ್ರಹ ಮಾಡಲಾಗಿತ್ತು. ಆದರೆ, ಈಗ ಸಿಎಂ ಬದಲಾವಣೆ ವಿಚಾರದಲ್ಲಿ ಆ ರೀತಿ ನಡೆದಿಲ್ಲ ಎಂದರು.
ಸಿಎಂ ಬದಲಾವಣೆ ವಿಚಾರ ಶಾಸಕಾಂಗ ಪಕ್ಷದ ಸಭೆ ನಡೆಸಿದಾಗ ಗೊತ್ತಾಗುತ್ತದೆ. ಅದರ ಬಗ್ಗೆ ನಾನು ಕಾಮೆಂಟ್ ಮಾಡೋದಿಲ್ಲ ಎಂದರು.
ರಾಜ್ಯದಲ್ಲಿ ಲಾಕಡೌನ್ ಓಪನ್ ಮಾಡೋದು ತೀರಾ ಅವಶ್ಯಕತೆ ಇದೆ. ಪಾಸಿಟಿವಿಟಿ ರೇಟ್ ಶೇ.9 ರಷ್ಟಿದೆ. ಸರ್ಕಾರ ಆಸ್ಪತ್ರೆಗಳಲ್ಲೂ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಅನಾವಶ್ಯಕವಾಗಿ ಲಾಕಡೌನ್ ವಿಸ್ತರಣೆ ಮಾಡೋದು ಸರಿಯಲ್ಲ. ಎಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚು ಇರುತ್ತದೆಯೋ ಅಲ್ಲಿ ಮಾತ್ರ ಲಾಕಡೌನ್ ಮಾಡಬೇಕು ಎಂದರು.