ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ರಾಯಾಪುರ ಗ್ರಾಮದ ರೈತರ ಜಮೀನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು,
ರೈತರ ಸಮಸ್ಯೆ ಅಲಿಸೋಣ ಅಂತ ಅವರ ಜಮೀನಿಗೆ ಬಂದಿದ್ದೇನೆ. ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ. ರೈತರಿಗೆ ತರಕಾರಿ ಮಾರಾಟ ಮಾಡೋಕೆ ಕೇವಲ ಎರಡೂ ಗಂಟೆ ಅವಕಾಶ ನೀಡುತ್ತಾರೆ. ಆದರೆ ಲಿಕ್ಕರ್ ಮಾರುವುದಕ್ಕೆ ಸಂಜೆ 4 ಗಂಟೆಯವರೆಗೂ ಅವಕಾಶ ನೀಡುತ್ತೀರಿ. ನಿಮಗೆ ಕಣ್ಣು,ಹೃದಯ ಇದೆಯಾ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಕೊಡಿ. ನಿಮ್ಮ ಅಧಿಕಾರ ಏನು ನಡೆಯುತ್ತಿಲ್ಲ. ನಾನು ಹೇಳಿದ ಮೇಲೆ ಕೆಲವು ಮಿನಿಸ್ಟರ್ ಗಳನ್ನು ಜಿಲ್ಲೆಗೆ ಕಳಿಸಿದ್ದೀರಿ. ನಾವು ರೈತರ ಜೊತೆ ನಿಲ್ಲುತ್ತೇವೆ ಎಂದರು.
ಇನ್ನೂ ಲಾಕ್ ಡೌನ್ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನಾನೇನು ಹೇಳಲಾರೆ. ಅದು ಸರ್ಕಾರದ ನಿರ್ಧಾರ, ಅವರು ಏನಾದರೂ ಮಾಡಿಕೊಳ್ಳಲಿ. ನನಗೆ ಸರ್ಕಾರ ಕೇಳಿದರೆ ನನ್ನ ಅಭಿಪ್ರಾಯ ಹೇಳ್ತೀನಿ, ಆವಾಗ ಉತ್ತರ ಕೊಡ್ತೀನಿ.
ಈಗ ನಾನು ಜನರ ಹತ್ತಿರ ಬಂದಿದ್ದೇನೆ. ಆ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು.