ಹುಬ್ಬಳ್ಳಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಯತ್ನ ನಡೆದಿಲ್ಲ. ಈ ವರೆಗೆ ರಾಜ್ಯ, ನಾಯಕರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಖಚಿತ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋರೋನಾ ಎರಡನೇ ಅಲೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ರಾಜಕೀಯ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರ ಕೋರೋನಾ ನಿಯಂತ್ರಣಕ್ಕೆ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇದಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕು ಅದನ್ನು ಬಿಟ್ಟು ದಿನಪೂರ್ತಿ ಟೀಕೆ ಮಾಡುವುದು ಸರಿಯಲ್ಲ. ಹೀಗಾಗಿಯೇ ಕಾಂಗ್ರೆಸ್ ಅವನತಿಗೆ ಕಾರಣ ಎಂದು ವ್ಯಂಗ್ಯವಾಡಿದರು.
ಇನ್ನೂ ಕಾಂಗ್ರೆಸ್ 100 ಕೋಟಿ ಸರ್ಕಾರಕ್ಕೆ ನೀಡುವ ವಿಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರ ತಮ್ಮ ಸ್ವಂತ ಹಣವನ್ನು ಕೊಟ್ಟಿಲ್ಲ. ಸುಮ್ಮನೆ ಪ್ರಚಾರಕ್ಕೆ ಇಲ್ಲಸಲ್ಲದನ್ನು ಸರಿಯಲ್ಲ. ಈ ಸಂದಿಗ್ಧ ಸಮಯದಲ್ಲಿ ಒಂದು ಒಳ್ಳೆಯ ಪ್ರತಿಪ್ರಕ್ಷವಾಗಿ ಕೆಲಸ ಮಾಡುವುದು ಉತ್ತಮ ಎಂದರು.