ಧಾರವಾಡ: ಲಾಕ್‌ಡೌನ್ ಹಿನ್ನಲೆ ಅದನ್ನೇ ಬಂಡವಾಳ ಮಾಡಿಕೊಂಡಿದ್ದ ಓರ್ವ ಯುವಕ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಯುವಕನನ್ನು ಅಬಕಾರಿ ಪೊಲೀಸರು ತಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆ ಯುವಕ ಬೈಕ್ ಹಾಗೂ ಮದ್ಯದ ಬಾಕ್ಸ್ ಗಳನ್ನು ಬಿಟ್ಟು ಪರಾರಿಯಾಗಿರುವ ಘಟನೆ ಮರೇವಾಡ ಕ್ರಾಸ್ ಬಳಿ ನಡೆದಿದೆ .
ಕೃತಿಕ್ ಸುಭಾಸ್ ಕಲಾಲ್ ವಯಾ (೩೦) ಎಂಬಾತನೇ ಪರಾರಿಯಾಗಿರುವ ಆರೋಪಿ ಯಾಗಿದ್ದಾನೆ . ಧಾರವಾಡ ತಾಲ್ಲೂಕು ಮರೇವಾಡ ಕ್ರಾಸ್ ಬಳಿ ಅಬಕಾರಿ ಪೊಲೀಸರು ಯುವಕರನ್ನು ತಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆತನ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಗೊತ್ತಾಗಿದೆ . ಅಲ್ಲಿಂದ ಪೊಲೀಸರಿಂದ ತಪ್ಪಿಸಿಕೊಂಡು ಯುವಕ ಪರಾರಿಯಾಗಿದ್ದಾನೆ .
ಯುವಕನ ಬಳಿ ಇದ್ದ ಮದ್ಯದ ಬಾಕ್ಸ್ ಗಳು ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಚಾಲಕನ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.