ಹುಬ್ಬಳ್ಳಿ: ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ 207 ಜನರಿಗೆ ಇಂದು ಹುಬ್ಬಳ್ಳಿ ಪತ್ರಕರ್ತರ ಭವನದಲ್ಲಿ ಕೋವಿಡ್ ಲಸಿಕೆ ನೀಡಲಾಯಿತು.
ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವ ವರದಿಗಾರರು, ವಿಡಿಯೋ ಜರ್ನಲಿಸ್ಟ್, ಮುದ್ರಣ ಮಾಧ್ಯಮದ ವರದಿಗಾರರು, ಉಪಸಂಪಾದಕರು, ಪೋಟೊ ಜರ್ನಲಿಸ್ಟ್, ಸಂಪಾದಕೀಯ, ಮುದ್ರಣ, ಜಾಹೀರಾತು ಸೇರಿದಂತೆ ಪತ್ರಿಕಾಲಯಗಳ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಆದ್ಯತೆ ಮೇರೆಗೆ ಲಸಿಕೆ ಪಡೆದು ಕೊಂಡರು.
18 ರಿಂದ 45 ವಯೋಮಾನದ ಒಳಗಿನ 150 ಹಾಗೂ 45 ವಯೋಮಾನ ಮೇಲ್ಪಟ್ಟ 51 ಜನರಿಗೆ ಅಸ್ಟ್ರಜನಿಕಾ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡಲಾಯಿತು.
ಚಿಟಗುಪ್ಪಿ ವೈದ್ಯಾಧಿಕಾರಿಗಳಾದ ಶ್ರೀಧರ ದಂಡಪ್ಪನವರ ಹಾಗೂ ಪ್ರಕಾಶ್ ನರಗುಂದ ಲಸಿಕಾ ಅಭಿಯಾನದ ಮೇಲು ಉಸ್ತುವಾರಿ ವಹಿಸಿದ್ದರು. ವೈದ್ಯಕೀಯ ಸಿಬ್ಬಂದಿಗಳಾದ ಶಕ್ತಿಬಾಯಿ, ಶೋಭಾ ದಿವಾಕರ್, ಪವಿತ್ರ ಎಸ್, ಶ್ವೇತಾ, ವಿರೇಶ್ ಲಸಿಕೆ ಕಾರ್ಯವನ್ನು ನಿರ್ವಹಿಸಿದರು. ವಾರ್ತಾ ಇಲಾಖೆ ಸಿಬ್ಬಂದಿಗಳಾದ ವೇಣುಗೋಪಾಲ. ಪಿ.ಎಂ. ಭಾರತಿ ಎಸ್ ಮಟ್ಟಿ, ರಾಮಚಂದ್ರ ದ ಉಕ್ಕಲಿ ಹಾಗೂ ಶಿವಾನಂಧ ಭೀಪ್ಪನವರ್, ಹುಬ್ಬಳ್ಳಿ ಪತ್ರಕರ್ತರ ಕಾರ್ಯಾಲಯದ ಲಾಲ್ ಸಾಬ್ ನದಾಫ್ ಸಾಮಾಜಿಕ ಅಂತರದೊಂದಿಗೆ ಲಸಿಕಾ ಕಾರ್ಯಕ್ಕೆ ನೆಡೆಯಲು ಅನುವು ಮಾಡಿಕೊಟ್ಟರು. ಈ ಹಿಂದೆ ಪತ್ರಕರ್ತರಾಗಿ ಮೇ 11 ರಂದು ಆಯೋಜಿಸಲಾದ ಲಸಿಕಾ ಅಭಿಯಾದಲ್ಲಿ 240 ಮಾಧ್ಯಮ ಪತ್ರಿನಿಧಿಗಳು ಲಸಿಕೆ ಪಡೆದುಕೊಂಡಿದ್ದರು.