ಹುಬ್ಬಳ್ಳಿ : ವಿಧಾನ ಪರಿಷತ್ ಶಾಸಕ ಪ್ರದೀಪ್ ಶೆಟ್ಟರ್ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಯಡಿ ಬಿಡುಗಡೆಯಾದ 50 ಲಕ್ಷ ರೂಪಾಯಿಗಳ ಅನುದಾನ್ನು ಕೋವಿಡ್ ಕಾರ್ಯಗಳಿಗೆ ಬಳಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಪತ್ರ ನೀಡಿದ್ದಾರೆ. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರ ಹಸ್ತಾಂತರಿಸಿರುವ ಅವರು, ತಮ್ಮ ಮತಕ್ಷೇತ್ರದ ವ್ಯಾಪ್ತಿಯ ಧಾರವಾಡ ಜಿಲ್ಲೆಗೆ 30 ಲಕ್ಷ ಹಾಗೂ ಹಾವೇರಿ, ಗದಗ ಜಿಲ್ಲೆಗಳಿ ತಲಾ 10 ಲಕ್ಷ ಅನುದಾನದ ಬಳಕೆ ಮಾಡುವಂತೆ ತಿಳಿಸಿದ್ದಾರೆ.
