ಹುಬ್ಬಳ್ಳಿ : ಕೋವಿಡ್ ಹತ್ತಿಕ್ಕಲು ಕಾಂಗ್ರೆಸ್ ಪಕ್ಷದ ಬೆಂಬಲ ಕೊಡದೇ ಟೂಲ್ ಕಿಟ್ ಮೂಲಕ ದೇಶದ ಅರಾಜಕತೆ ಮೂಲಕ ತಪ್ಪು ಸಂದೇಶ ಹರಡಿಸುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹರಿಹಾಯ್ದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮತೀಯ ಸೌಹಾರ್ದ ಕೆಡಿಸುವ ಕಾರ್ಯ ಮಾಡುತ್ತಿದೆ. ಆದ್ದರಿಂದಲೇ ಕಾಂಗ್ರೆಸ್ ಅಧೋಗತಿಗೆ ತೆರಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಸಂದಿಗ್ಧ ಸಂದರ್ಭದಲ್ಲಿ ಜನರ ಜೊತೆಗೆ ಇರುವ ಬದಲು ಸ್ವಾರ್ಥಕ್ಕಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದು, ಟೂಲ್ ಕಿಟ್ ಮೂಲಕ ಜನತೆಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತವಾಗಿ ಕಾಂಗ್ರೆಸ್ ರಚನಾತ್ಮಕ ಸಂದೇಶ ನೀಡಬೇಕು ವಿನಃ ಸಮಾಜ ವಿರೋಧಿ, ಜನರ ವಿರೋಧಿ ಕಾರ್ಯ ಮಾಡುತ್ತಿದೆ.
ಚೈನಾ ವೈರಸ್ ಗೆ ಚೈನಾ ವೈರಸ್ ಎನ್ನುವ ಧೈರ್ಯ ಕಾಂಗ್ರೆಸ್ ಗೆ ಇಲ್ಲ. ಆದರೇ ಪ್ರಧಾನಮಂತ್ರಿಯನ್ನು ತೆಗಳುವ ಕಾರ್ಯಕ್ಕೆ ಮುಂದಾಗುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ರಾಜಕೀಯ ಹಪಾಹಪಿಗೆ ನಾವು ಖಂಡಿಸುತ್ತೇವೆ. ಮಂಗ್ಯಾ ತಾನು ತಿಂದು ಆಡಿನ ಮುಖಕ್ಕೆ ಬೆಣ್ಣೆ ಒರಸಿತ್ತು ಎನ್ನುವ ಹಾಗಿದೆ ಕಾಂಗ್ರೆಸಿಗರದು ಎಂದು ಬೆಲ್ಲದ್ ವ್ಯಂಗ್ಯವಾಡಿದರು.
Hubli News Latest Kannada News