ಹುಬ್ಬಳ್ಳಿ : ಡೂಪ್ಲಿಕೇಟ್ ಐಡಿ ಕಾರ್ಡ್ ತೋರಿಸಿ ಪೊಲೀಸರನ್ನ ಯಾಮಾರಿಸಲು ಮುಂದಾಗಿದ್ದ ನಕಲಿ ಪತ್ರಕರ್ತನೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಈತ ಈಟಿವಿ ಕನ್ನಡ ವಾಹಿನಿಯ ನಕಲಿ ಐಡಿ ಕಾರ್ಡ್ ತೋರಿಸಿ ಅನಗತ್ಯವಾಗಿ ಬೈಕ್ ನಲ್ಲಿ ಓಡಾಟ ಮಾಡುತ್ತಿದ್ದ. ಆದ್ರೆ ಇಂದು ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ನಕಲಿ ಐಡಿ ಕಾರ್ಡ್ ಸಮೇತವಾಗಿ ಸಿಕ್ಕಿಬಿದ್ದಿದ್ದಾನೆ. ಜಾಕ್ ನೆಲ್ಸನ್ ಎನ್ನುವ ವ್ಯಕ್ತಿಯು ವಾಹಿನಿವೊಂದರ ನಕಲಿ ಐಡಿ ಕಾರ್ಡ್ ಧರಿಸಿಕೊಂಡು ಬೇಕಾಬಿಟ್ಟಿ ಓಡಾಡುತ್ತಿದ್ದವನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತಪಾಸಣೆ ವೇಳೆ ಸಿಕ್ಕಿಬಿದ್ದ ನಕಲಿ ಪತ್ರಕರ್ತನನ್ನು ವಶಕ್ಕೆ ಪಡೆದು, ಆತನ ಬೈಕ್ ಅನ್ನು ಸೀಜ್ ಮಾಡಲಾಗಿದೆ.
