ಬೆಂಗಳೂರು: ಪ್ರಜ್ವಲ್ ಬಂಧನವಂತೂ ಆಯ್ತು – ಇನ್ನೇನಿದ್ದರೂ ಎಸ್‌ಐಟಿಯಿಂದ ವಿಚಾರಣೆ ಬಿಸಿ
ಬೆಂಗಳೂರು: ಎಸ್‌ಐಟಿಯಿಂದ ಪ್ರಜ್ವಲ್ ರೇವಣ್ಣ ಬಂಧನವಾಗಿದ್ದು, ಎಸ್‌ಐಟಿ ತನ್ನದ ಆಯಾಮದಲ್ಲಿ ಪ್ರಜ್ವಲ್‌ನನ್ನ ವಿಚಾರಣೆ ನಡೆಸಲಿದೆ.
ಮೊದಲಿಗೆ ಪ್ರಜ್ವಲ್ ವಿರುದ್ಧ ದಾಖಲಾದ ಮೂರು ಪ್ರಕರಣಗಳ ಮಾಹಿತಿ ನೀಡಲಿರುವ ಅಧಿಕಾರಿಗಳು, ಲೈಂಗಿಕ ದೌರ್ಜನ್ಯ ಹಾಗೂ ಎರಡು ಅತ್ಯಾಚಾರ ಪ್ರಕರಣಗಳ ಮಾಹಿತಿ ನೀಡಲಿದ್ದಾರೆ. ನಂತರ ಪ್ರತಿ ಪ್ರಕರಣ ಸಂಬಂಧ ಬಂಧನ ಪ್ರಕ್ರಿಯೆ ನಡೆಸುತ್ತಾರೆ. ತದನಂತರ ಸಂತ್ರಸ್ತೆಯರು ಹೇಳಿಕೆಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿ, ಹಾಸನದಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋಗಳ ಬಗ್ಗೆ ವಿಚಾರಣೆ ನಡೆಸುತ್ತಾರೆ.
ವಿಡಿಯೋದಲ್ಲಿ ಇರುವ ವ್ಯಕ್ತಿ ಯಾರು? ವಿಡಿಯೋ ರೆಕಾರ್ಡ್ ಮಾಡಿದ್ದು ಯಾರು? ವಿಡಿಯೋಗಳು ವೈರಲ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಮಾಹಿತಿ ಇದ್ಯಾ? ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಯಾವುದು? ರೆಕಾರ್ಡ್ ಮಾಡಿದ ಮೊಬೈಲ್ ಫೋನ್ ನಿಮ್ಮದೇನಾ.? ನಿಮ್ಮ ಮೊಬೈಲ್ ಫೋನ್ ಯಾರಾದ್ರು ತೆಗೆದುಕೊಂಡಿದ್ರಾ? ನಿಮ್ಮ ಮಾಜಿ ಕಾರು ಚಾಲಕ ಕಾರ್ತಿಕ್ ಬಳಿ ಇಷ್ಟು ವಿಡಿಯೋಗಳು ಬಂದಿದ್ದು ಹೇಗೆ? ಎಂದು ಪ್ರಶ್ನೆ ಮಾಡ್ತಾರೆ.
ಬಳಿಕ ಸಂತ್ರಸ್ತೆಯರ ಹೇಳಿಕೆ ಮುಂದಿಟ್ಟು ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ನನ್ನು ವಿಚಾರಣೆ ನಡೆಸಲಿದ್ದಾರೆ. ಇನ್ನು ಈ ಎಲ್ಲಾ ಪ್ರಶ್ನೆಗಳಿಗೂ ಪ್ರಜ್ವಲ್ ನನಗೆ ಗೊತ್ತಿಲ್ಲ. ನಾನು ವಿಡಿಯೋ ಮಾಡಿಲ್ಲ. ಇದೆಲ್ಲ ಷಡ್ಯಂತ್ರ ಅಂತ ಉತ್ತರ ನೀಡಬಹುದು? ಇಲ್ಲವೇ ಈ ವಿಡಿಯೋಗಳನ್ನ ಮಾರ್ಫ್ ಮಾಡಿದ್ದಾರೆ. ಅಥವಾ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆ ನಡೆಸಿದ್ದೇವೆ ಎಂಬ ಉತ್ತರ ನೀಡಬಹುದು.